refreshment ರಿಹ್ರೆಷ್‍ಮಂಟ್‍
ನಾಮವಾಚಕ
  1. (ದೇಹದ ವಿಷಯದಲ್ಲಿ) ದಣಿವಾರಿಕೆ; ಹೊಸ ಚೈತನ್ಯ ತುಂಬುವುದು.
  2. (ಮನಸ್ಸಿನ ವಿಷಯದಲ್ಲಿ) ಆಲಸ್ಯ ಬೇಸರಗಳನ್ನು ತೊಲಗಿಸುವುದು; ಉಲ್ಲಾಸ ತುಂಬುವುದು.
  3. (ಸಾಮಾನ್ಯವಾಗಿ ಬಹುವಚನದಲ್ಲಿ) ದಣಿವಾರಿಸುವ, ಹಸಿವು ಬಾಯಾರಿಕೆಗಳನ್ನಡಗಿಸುವ–ಆಹಾರ ಪಾನೀಯ, ಅನ್ನಪಾನ, ಉಪಾಹಾರ: take some refreshments ಯಾವುದಾದರೂ ಉಪಾಹಾರವನ್ನು ತೆಗೆದುಕೊ.
  4. (ಮನಸ್ಸಿಗೆ) ಉಲ್ಲಾಸಕಾರಿ; ಹರ್ಷದಾಯಿ; ಉಲ್ಲಾಸಗೊಳಿಸುವ, ಹರ್ಷಗೊಳಿಸುವ ವಿಷಯ: the sight was a refreshment to him ಆ ನೋಟವು ಅವನಿಗೆ ಹರ್ಷದಾಯಕವಾಗಿತ್ತು.
ಪದಗುಚ್ಛ

refreshment room (ರೈಲ್ವೆನಿಲ್ದಾಣ, ಬಸ್‍ನಿಲ್ದಾಣ, ಮೊದಲಾದವುಗಳಲ್ಲಿರುವ) ಭೋಜನಶಾಲೆ ಯಾ ಉಪಾಹಾರ ಗೃಹ.