refresh ರಿಹ್ರೆಷ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ನೀರನ್ನು) ತಂಪುಗೊಳಿಸು; (ಒಂದು ಸ್ಥಳ, ಸ್ಥಳದ ವಾತಾವರಣ ಮೊದಲಾದವನ್ನು ಹೊಸಗಾಳಿಯನ್ನು ಯಾ ತಂಗಾಳಿಯನ್ನು ಬೀಸುವಂತೆ ಮಾಡಿ) ತಂಪಾಗಿಸು, ಹಸನುಗೊಳಿಸು.
  2. (ಮುಖ್ಯವಾಗಿ ಆತ್ಮಾರ್ಥಕ) (ಆಹಾರ, ಪಾನೀಯ, ವಿಶ್ರಾಂತಿ ಮೊದಲಾದವುಗಳ ವಿಷಯದಲ್ಲಿ) ದಣಿವಾರಿಸು; ಹೊಸ ಚೈತನ್ಯಕೊಡು; ಶಕ್ತಿ, ಉಲ್ಲಾಸಗಳನ್ನುಂಟುಮಾಡು: refresh onself (ಆಹಾರ ಪಾನೀಯಗಳಿಂದ) ಹೊಸ ಚೈತನ್ಯವನ್ನು ತಂದುಕೊ.
  3. (ಮುಖ್ಯವಾಗಿ ಆತ್ಮಾರ್ಥಕ) (ವಿನೋದ, ಮನರಂಜನೆ ಮೊದಲಾದವುಗಳ ವಿಷಯದಲ್ಲಿ) ಬೇಸರ ಅಲಸಿಕೆಗಳನ್ನು ಕಳೆ; ಉಲ್ಲಾಸಗೊಳಿಸು; ಹರ್ಷಗೊಳಿಸು.
  4. (ಮುಖ್ಯವಾಗಿ ತನ್ನ ಮಾಹಿತಿಯ ಮೂಲವನ್ನು ನೋಡಿ ನೆನಪನ್ನು) ಚುರುಕುಗೊಳಿಸಿಕೊ; ತೀಕ್ಷ್ಣಗೊಳಿಸಿಕೊ:
    1. (ಹೊಸದಾಗಿ ಉರುವಲನ್ನು ಹಾಕಿ, ಬೆಂಕಿಯನ್ನು, ಉರಿಯನ್ನು) ಪ್ರಜ್ವಲಗೊಳಿಸು.
    2. (ವಿದ್ಯುತ್ಕೋಶ ಮೊದಲಾದವನ್ನು, ವಿದ್ಯುತ್‍ ಮೊದಲಾದವುಗಳಿಂದ ತುಂಬಿ) ಚುರುಕುಗೊಳಿಸು; ಪಟುಗೊಳಿಸು.
  5. (ಮುಖ್ಯವಾಗಿ) ಪಾನೀಯವನ್ನು ಕುಡಿ.