refractoriness ರಿಹ್ರಾಕ್ಟರಿನಿಸ್‍
ನಾಮವಾಚಕ
  1. ಹಠಮಾರಿತನ; ಮೊಂಡುತನ; ಅಂಕೆಗೊಳಪಡದಿರುವಿಕೆ; ಹತೋಟಿಗೆ ಬಾರದಿರುವಿಕೆ; ಅಗಡುತನ; ಎದುರುಬೀಳುವ, ತಿರುಗಿಬೀಳುವ, ಮೇಲೆ ಹಾಯುವ–ಪ್ರವೃತ್ತಿ, ಸ್ವಭಾವ.
  2. (ರೋಗ, ಗಾಯ ಮೊದಲಾದವುಗಳ ವಿಷಯದಲ್ಲಿ) ಚಿಕಿತ್ಸೆಗೆ ಸಗ್ಗದಿರುವಿಕೆ, ಜಗ್ಗದಿರುವಿಕೆ.
  3. (ಲೋಹ ಮೊದಲಾದವುಗಳ ವಿಷಯದಲ್ಲಿ)
    1. ಹಿಡಿತಕ್ಕೆ ಬಾರದಿರುವಿಕೆ.
    2. (ಕಾಯಿಸುವುದು, ಕರಗಿಸುವುದೇ, ಮೊದಲಾದ) ಕ್ರಿಯೆಗಳಿಗೆ ಕಷ್ಟಸಾಧ್ಯವಾಗಿರುವಿಕೆ.