refraction ರಿಹ್ರಾಕ್‍ಷನ್‍
ನಾಮವಾಚಕ

ವಕ್ರೀಕರಣ; ಒಂದು ಮಾಧ್ಯಮದಿಂದ ಇನ್ನೊಂದನ್ನು ಓರೆಯಾಗಿ ಪ್ರವೇಶಿಸುವ ಬೆಳಕಿನ ರಶ್ಮಿಗೆ ಉಂಟಾಗುವ ವಿಚಲನೆ ಯಾ ಅದರ ಪ್ರಮಾಣ. Figure: refraction

ಪದಗುಚ್ಛ

angle of refraction ವಕ್ರೀಕರಣ ಕೋನ; ವಕ್ರೀಕರಣಗೊಂಡ ಬೆಳಕಿನ ರಶ್ಮಿಗೂ ವಕ್ರೀಕರಣ ಆಗುವ ಬಿಂದುವಿನಲ್ಲಿ ಎಳೆದ ಲಂಬರೇಖೆಗೂ ನಡುವಣ ಕೋನ.