See also 2reform
1reform ರಿಹಾರ್ಮ್‍
ಸಕರ್ಮಕ ಕ್ರಿಯಾಪದ
  1. ಸುಧಾರಿಸು; ತಿದ್ದು; (ಕುಂದುಕೊರತೆಗಳು, ತಪ್ಪುಗಳು ಮೊದಲಾದವನ್ನು ನಿವಾರಿಸುವುದರ ಮೂಲಕ, ವ್ಯಕ್ತಿ, ಸಂಸ್ಥೆ, ಕಾರ್ಯವಿಧಾನ, ನಡೆವಳಿಕೆ, ಮೊದಲಾದವನ್ನು) ಸರಿಪಡಿಸು; ಸುಧಾರಿಸು; ನಿರ್ದುಷ್ಟವಾಗಿಸು.
  2. (ಅನ್ಯಾಯ, ದುರುಪಯೋಗ, ದುರಾಚಾರ ಮೊದಲಾದವನ್ನು) ತೊಡೆದು ಹಾಕು; ತೊಲಗಿಸು; ನಿವಾರಿಸು.
  3. (ಅಮೆರಿಕನ್‍ ಪ್ರಯೋಗ) (ಕಾನೂನಿನ ದಾಖಲೆಯನ್ನು) ಸರಿಪಡಿಸು; ತಿದ್ದು.
  4. (ರಸಾಯನವಿಜ್ಞಾನ) ಪುನಾರೊಪಿಸು; (ನೇರ ಮತ್ತು ನೀಳ ಸರಪಳಿ ಹೈಡ್ರೊಕಾರ್ಬನ್‍ಗಳಿರುವ ಪೆಟ್ರೋಲಿಯಮ್‍ ಅಂಶವನ್ನು) ಛಿದ್ರೀಕರಣಕ್ಕೆ ಒಳಪಡಿಸಿ ಹ್ರಸ್ವ ಮತ್ತು ಶಾಖಾ ಸರಪಳಿ ಹೈಡ್ರೋಕಾರ್ಬನ್‍ಗಳಿರುವ ಮತ್ತು ಪೆಟ್ರೋಲ್‍ ಆಗಿ ಬಳಸಬಹುದಾದ ದ್ರವವನ್ನು ತಯಾರಿಸು.
ಅಕರ್ಮಕ ಕ್ರಿಯಾಪದ

(ಕುಂದುಕೊರತೆಗಳು, ತಪ್ಪುಗಳು ಮೊದಲಾದವನ್ನು ನಿವಾರಿಸಿಕೊಂಡು) ತನ್ನನ್ನೇ ತಿದ್ದಿಕೊ; ಸುಧಾರಿಸಿಕೊ; ದೋಷರಹಿತಗೊಳಿಸಿಕೊ: reformed churches ಸುಧಾರಿತ ಚರ್ಚುಗಳು.

See also 1reform
2reform ರಿಹಾರ್ಮ್‍
ನಾಮವಾಚಕ
  1. ದೋಷನಿವಾರಣೆ; ಮುಖ್ಯವಾಗಿ ರಾಜಕೀಯದಲ್ಲಿ ಅನ್ಯಾಯ, ದುರಾಚಾರ ಮೊದಲಾದವುಗಳ ನಿವಾರಣೆ.
  2. (ಸೂಚಿಸಲಾದ ಯಾ ಮಾಡಲಾದ) ಸುಧಾರಣೆ; ಉತ್ತಮ ತಿದ್ದುಪಾಡು.