reflector ರಿಹ್ಲೆಕ್ಟರ್‍
ನಾಮವಾಚಕ
    1. ಬಿಂಬಗಳನ್ನುಂಟುಮಾಡಲು ಕನ್ನಡಿಯನ್ನು ಬಳಸುವ ದೂರದರ್ಶಕ ಮೊದಲಾದವು.
    2. (ಅಂಥ ದೂರದರ್ಶಕದಲ್ಲಿರುವ) ಕನ್ನಡಿ.
  1. ಪ್ರತಿಫಲಕ; ರಿಹ್ಲೆಕ್ಟರು; ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಬೆಳಕನ್ನು ಪ್ರತಿಫಲಿಸಲು ಹಾಕಿದ ಗಾಜು, ಲೋಹ ಮೊದಲಾದವುಗಳ ಚೂರು, ಬಿಲ್ಲೆ, ಉದಾಹರಣೆಗೆ ಮೋಟಾರ್‍ಸೈಕಲ್ಲು, ಸೈಕಲ್ಲು ಮೊದಲಾದವುಗಳ ಹಿಂದುಗಡೆ ಹಾಕುವ ಕೆಂಪು ಬಿಲ್ಲೆ.
  2. ಪ್ರತಿಬಿಂಬಕ; (ವ್ಯಕ್ತಿ, ಗ್ರಂಥ ಮೊದಲಾದವುಗಳ ವಿಷಯದಲ್ಲಿ) ತಿಳಿದೋ ತಿಳಿಯದೆಯೋ ಪೂರ್ವಗ್ರಹಗಳು, ಯಾವುದೇ ಅಭ್ಯಾಸಗಳು ಮೊದಲಾದವನ್ನು ಪ್ರತಿಬಿಂಬಿಸುವ, ಪ್ರಕಟಿಸುವ–ಅಂಶ.
  3. ಕನ್ನಡಿ; ಪ್ರತಿಬಿಂಬಕ; ದರ್ಪಣ.