reflection ರಿಹ್ಲೆಕ್‍ಷನ್‍
ನಾಮವಾಚಕ
  1. ಮಾರ್ಪೊಳಪು; ಪ್ರತಿಫಲನ:
    1. ಪ್ರತಿಫಲಿತವಾದ ಬೆಳಕು, ಶಾಖ, ವರ್ಣ ಯಾ ಬಿಂಬ.
    2. ಮಾರ್ಪೊಳೆಯುವುದು; ಪ್ರತಿಫಲಿಸುವಿಕೆ.
  2. ಟೀಕೆ; ಆಕ್ಷೇಪ; ಖಂಡನೆ.
  3. ಕೆಟ್ಟ ಹೆಸರನ್ನು, ಅಪಕೀರ್ತಿಯನ್ನು, ಕಳಂಕವನ್ನು ತರುವಂಥ–ವರ್ತನೆ, ಕಾರ್ಯ; ಕಳಂಕ.
  4. ಪರ್ಯಾಲೋಚನೆ; ಪುನರಾಲೋಚನೆ: on reflection, I doubt whether I was right ಪರ್ಯಾಲೋಚಿಸಿದ ಮೇಲೆ ನಾನು ಮಾಡಿದ್ದು, ಹೇಳಿದ್ದು, ಸರಿಯೆ ಎಂದು ನನಗೆ ಸಂದೇಹವಾಗಿದೆ.
  5. ಪರ್ಯಾಲೋಚನ ಶಕ್ತಿ; ಇಂದ್ರಿಯಗೋಚರ ವಸ್ತು ಯಾ ವಿಷಯಗಳನ್ನು ಯಾ ಸಂವೇದನೆಯ ವಿಷಯಗಳನ್ನು, ಕುರಿತು ಚಿಂತಿಸುವ ಮನಸ್ಸಿನ ಶಕ್ತಿ, ಚಿಂತನ ಶಕ್ತಿ.
  6. ಮನಸ್ಸಿನ ಭಾವನೆ.
  7. ಮಾತಿನ ಆಕ್ಷೇಪ; ವಾಚಾ ಮಾಡಿದ ಟೀಕೆ.
  8. (ಒಂದು ವಿಷಯವನ್ನು ಕುರಿತು) ಹೇಳಿದ ಯಾ ಬರೆದ ಸೂಕ್ತಿ.
ಪದಗುಚ್ಛ

angle of reflection (ಭೌತವಿಜ್ಞಾನ) ಪ್ರತಿಫಲಿತಕೋನ; ಪ್ರತಿಫಲಿತ ಕಿರಣಕ್ಕೂ ಪ್ರತಿಫಲಿಸುವ ತಲಕ್ಕೆ ಎಳೆದ ಲಂಬಕ್ಕೂ ಇರುವ ಕೋನ.