refinement ರಿಹೈನ್‍ಮಂಟ್‍
ನಾಮವಾಚಕ
  1. ಪರಿಷ್ಕರಣ; ಸಂಸ್ಕರಣ; ಪರಿಶುದ್ಧಗೊಳಿಸುವುದು ಯಾ ಪರಿಶುದ್ಧವಾಗುವುದು; ಶುದ್ಧೀಕರಣ ಯಾ ಶುದ್ಧವಾಗುವುದು.
    1. ಸಂಸ್ಕಾರ; ಪರಿಷ್ಕಾರ; ಸುಸಂಸ್ಕೃತ ಲಕ್ಷಣ.
    2. ನಡೆನುಡಿ, ವೇಷಭಾಷೆ ಮೊದಲಾದವುಗಳಲ್ಲಿ ಉತ್ತಮ ಅಭಿರುಚಿ ಹೊಂದಿರುವಿಕೆ ಯಾ ಉತ್ತಮ ಅಭಿರುಚಿ.
    3. (ಭಾಷೆ, ಬರೆಹ ಮೊದಲಾದವುಗಳಲ್ಲಿ) ನಯನಾಜೂಕು; ಸೂಕ್ಷ್ಮತೆ.
  2. ಸೂಕ್ಷ್ಮತೆ; ಸೂಕ್ಷ್ಮ ತರ್ಕ ಯಾ ಅರ್ಥಭಾವಗಳ ತಾರತಮ್ಯವನ್ನರಿತು ಬಳಸುವ ಔಚಿತ್ಯಜ್ಞಾನ, ಉಚಿತ ಪ್ರಯೋಗ: the refinement of his reasoning was beyond the understanding of his rival ಆತನ ತರ್ಕಸೂಕ್ಷ್ಮತೆ ಆತನ ಪ್ರತಿದ್ವಂದ್ವಿಯ ಅರಿವಿಗೆ ಮೀರಿದ್ದಾಗಿತ್ತು.
  3. ಪರಿಷ್ಕಾರ; ಸುಧಾರಣೆ: a car with several refinements ಹಲವಾರು ಸುಧಾರಣೆಗಳುಳ್ಳ ಕಾರು.