See also 2reference
1reference ರೆಹರನ್ಸ್‍
ನಾಮವಾಚಕ
  1. (ಯಾವುದೇ ವಿಷಯವನ್ನು ತಕ್ಕ ಅಧಿಕಾರಿಯ ನಿರ್ಣಯ, ತೀರ್ಮಾನ ಯಾ ಪರಾಮರ್ಶನೆಗಾಗಿ) ಒಪ್ಪಿಸುವುದು; ಮುಂದಿಡುವುದು; ವಹಿಸಿಕೊಡುವುದು.
  2. (ನಿರ್ಣಯ, ತೀರ್ಮಾನ ಯಾ ಪರಾಮರ್ಶನೆಗಾಗಿ ವಹಿಸಿದ) ವಿಷಯದ ಯಾ ಪರಾಮರ್ಶನ ನಿಯಮಗಳ ವ್ಯಾಪ್ತಿ: the peerage was allowed without reference to the House of Lords ಹೌಸ್‍ ಆಹ್‍ ಲಾರ್ಡ್ಸ್‍ ಸಭೆಯ ಪರಾಮರ್ಶನಕ್ಕೆ ಒಪ್ಪಿಸದೆಯೇ ಆ ಪಿಯರ್‍ ಪದವಿಗೆ ಮನ್ನಣೆ ನೀಡಲಾಯಿತು. that is a question outside the terms of reference ಆ ಪ್ರಶ್ನೆ ಪರಾಮರ್ಶನದ ನಿಯಮಾವಳಿಯ ವ್ಯಾಪ್ತಿಗೆ ಹೊರತಾದದ್ದು.
  3. ಸಂಬಂಧ ಯಾ ಆನುಗುಣ್ಯ: success seems to have little reference to merit ಅರ್ಹತೆಗೂ ಸಫಲತೆಗೂ ಇರುವ ಸಂಬಂಧ ತೀರ ಅಲ್ಪವೆಂದು ತೋರುತ್ತದೆ.
  4. ಹೊಂದಿಕೆ; ಅನುರೂಪತೆ: the parts of a machine have reference to each other ಒಂದು ಯಂತ್ರದ ಭಾಗಗಳಲ್ಲಿ ಪರಸ್ಪರ ಹೊಂದಿಕೆ ಇರುತ್ತದೆ.
  5. ಪ್ರಸ್ತಾಪ; ಪ್ರಕರಣದೊಡನೆ ಇರುವ ಸಂಬಂಧದ ನಿರ್ದೇಶ, ಉಲ್ಲೇಖ: a reference to a previous conversation was made ಹಿಂದಿನ ಒಂದು ಸಂಭಾಷಣೆಯ ಪ್ರಸ್ತಾಪವನ್ನು ಎತ್ತಲಾಯಿತು.
    1. (ಪ್ರಸ್ತಾಪಿಸಿರುವ ವಿಷಯವು ದೊರೆಯುವ ಗ್ರಂಥಭಾಗ ಮೊದಲಾದವುಗಳಿಗೆ, ಮುಖ್ಯವಾಗಿ) ನಿರ್ದಿಷ್ಟ ಪುಟಕ್ಕೆ ಸಂಬಂಧಿಸಿದ ನಿರ್ದೇಶನ, ಸೂಚನೆ; ಆಕರದ, ಉಲ್ಲೇಖದ ದಾಖಲೆ: he does not give references ಆತ ಉಲ್ಲೇಖಗಳ ದಾಖಲೆಗಳನ್ನೇ ಕೊಟ್ಟಿಲ್ಲ.
    2. ಹಾಗೆ ಉಲ್ಲೇಖಿಸಿದ ಪುಸ್ತಕ ಯಾ ಭಾಗ.
  6. (ಓದುಗನ ಗಮನವನ್ನು ಅಡಿಟಿಪ್ಪಣಿ, ರೇಖಾಚಿತ್ರ, ಮೊದಲಾದವಕ್ಕೆ ಸೆಳೆಯಲು ಬಳಸುವ) ಸೂಚೀಚಿಹ್ನೆ; ನಿರ್ದೇಶಚಿಹ್ನೆ, ಉದಾಹರಣೆಗೆ asterisk, obelisk, double obelisk, ಇತ್ಯಾದಿ.
  7. (ಅಗತ್ಯವಾದ ವಿಷಯವನ್ನು ತಿಳಿದುಕೊಳ್ಳಲು) ಉಲ್ಲೇಖ ಭಾಗವನ್ನು ನೋಡುವುದು ಯಾ ತಿಳಿದ ವ್ಯಕ್ತಿಯನ್ನು ಕೇಳುವುದು ಯಾ ಅವನ ಬಳಿಗೆ ಕಳುಹಿಸುವುದು: a reference to the dictionary will solve the problem ನಿಘಂಟಿನಲ್ಲಿ ಉಲ್ಲೇಖವನ್ನು ನೋಡಿದರೆ ಸಮಸ್ಯೆ ಬಗೆಹರಿಯುತ್ತದೆ. I should like to make reference to your last employer ಹಿಂದೆ ನಿಮ್ಮನ್ನು ನೇಮಿಸಿಕೊಂಡಿದ್ದ ಅಧಿಕಾರಿಯಿಂದ ವಿಷಯವನ್ನು ಕೇಳಿ ತಿಳಿದುಕೊಳ್ಳಬೇಕೆಂದಿದ್ದೇನೆ.
  8. (ಹುದ್ದೆಗಾಗಿ ಅರ್ಜಿ ಹಾಕುವ ಯಾ ಮಾರಾಟಕ್ಕಾಗಿ ಸರಕುಗಳನ್ನು ತರುವ ವ್ಯಕ್ತಿಯು) ನಂಬಿಕೆಗಾಗಿ ಹೆಸರು ಕೊಡುವ, ಹೆಸರಿಸುವ, ಗಣ್ಯವ್ಯಕ್ತಿ, ಪ್ರಮಾಣಿಸುವ ವ್ಯಕ್ತಿ: who are your references? ನಂಬಿಕೆಗಾಗಿ ನೀವು ಹೆಸರಿಸುವ ಗಣ್ಯರಾರು?
  9. (ಸಡಿಲವಾಗಿ) ಅರ್ಹತಾಪತ್ರ; ಶಿಫಾರಸುಪತ್ರ; ಭರವಸೆ ಪತ್ರ.
ಪದಗುಚ್ಛ
  1. book of reference ಪರಾಮರ್ಶನ ಗ್ರಂಥ; (ಸಂಪೂರ್ಣವಾಗಿ ಓದಲಿಕ್ಕಲ್ಲದೆ, ಆಗಿಂದಾಗ್ಯೆ ಉಲ್ಲೇಖಗಳನ್ನು ಅವಲೋಕಿಸುವ ಸಲುವಾಗಿ ಬರೆದ) ಅವಲೋಕನ ಗ್ರಂಥ.
  2. in reference to (or with reference to)–ಕ್ಕೆ ಸಂಬಂಧಿಸಿದಂತೆ; –ನ್ನು ಕುರಿತು.
  3. legislation by reference (ಹಿಂದಿನ ಕಾನೂನುಗಳನ್ನು ಪುನಃ ಪುನರುಕ್ತಿಮಾಡುವ ಬದಲು ಅವುಗಳನ್ನು ಸುಮ್ಮನೆ) ಉಲ್ಲೇಖಿಸಿ ಮಸೂದೆ ತಯಾರಿಸುವುದು; ಉಲ್ಲೇಖನ ಮಸೂದೆ.
  4. reference library (ಪುಸ್ತಕಗಳನ್ನು ಎರವಲಾಗಿ ಪಡೆದುಕೊಂಡು ಹೋಗದೆ ಪುಸ್ತಕಾಲಯದಲ್ಲೇ ಅವಲೋಕಿಸುವ) ಅವಲೋಕನ ಪುಸ್ತಕಾಲಯ; ಪರಾಮರ್ಶನ ಗ್ರಂಥಾಲಯ.
  5. without reference to (–ನ್ನು) ಗಮನಕ್ಕೆ ತೆಗೆದುಕೊಳ್ಳದೆ; (–ರ) ಸಂಬಂಧವೇನೆಂದು ನೋಡದೆ, ಲೆಕ್ಕಿಸದೆ, ಪರಿಗಣಿಸದೆ.
See also 1reference
2reference ರೆಹರನ್ಸ್‍
ಸಕರ್ಮಕ ಕ್ರಿಯಾಪದ

(ಗ್ರಂಥಕ್ಕೆ) ಆಕರ ಯಾ ಪ್ರಮಾಣಗಳ ಉಲ್ಲೇಖಗಳನ್ನು ಒದಗಿಸು.