See also 2reef  3reef
1reef ರೀಹ್‍
ನಾಮವಾಚಕ

(ನೌಕಾಯಾನ) ಹಾಯಿಪಟ್ಟಿ; ಗಾಳಿಗೆ ಒಡ್ಡಿರುವ ಹಾಯಿಯ ಹಾಳೆಯನ್ನು ಕಡಮೆ ಮಾಡಲು, ಹಾಯಿಯನ್ನು ಸುತ್ತಿ ಮುದುರಲು ಅನುಕೂಲಿಸುವಂತೆ ನಡುನಡುವೆ ಬಿಗಿದಿರುವ 3-4 ಅಡ್ಡಪಟ್ಟಿಗಳಲ್ಲೊಂದು.

ಪದಗುಚ್ಛ

take in a reef (ಹಾಯಿಯನ್ನು ಒಂದು ಸಲ ಮಡಚಿ) ಎಚ್ಚರಿಕೆಯಿಂದ ಮುಂದೆ ಸಾಗು (ರೂಪಕವಾಗಿ ಸಹ).

See also 1reef  3reef
2reef ರೀಹ್‍
ಸಕರ್ಮಕ ಕ್ರಿಯಾಪದ

(ನೌಕಾಯಾನ)

  1. ಹಾಯಿಪಟ್ಟಿಯನ್ನು ಯಾ ಹಾಯಿಪಟ್ಟಿಗಳನ್ನು ಒಳಗಡೆಗೆ ಮಡಿಚು.
  2. (ಮೇಲ್ಕೂವೆ, ಹಡಗಿನ ಮೂಕಿ, ಚಾಲಕಚಕ್ರದ ಹುಟ್ಟುಪಟ್ಟಿಗಳು, ಇವನ್ನು ನಡುಭಾಗದ ಹತ್ತಿರಕ್ಕೆ ಸರಿಸಿ) ಚಿಕ್ಕದುಮಾಡು.
ಪದಗುಚ್ಛ
  1. double-reefed ಎರಡು ಹಾಯಿಪಟ್ಟಿಗಳನ್ನು ಮಡಿಚಿದ.
  2. single-reefed ಒಂದು ಹಾಯಿಪಟ್ಟಿಯನ್ನು ಮಡಿಚಿದ.
  3. treble-reefed ಮೂರುಹಾಯಿಪಟ್ಟಿಗಳನ್ನು ಮಡಿಚಿದ.
See also 1reef  2reef
3reef ರೀಹ್‍
ನಾಮವಾಚಕ
  1. (ನೀರಿನ ಮಟ್ಟದ ಸಮಕ್ಕೆ ಯಾ ಸ್ವಲ್ಪ ಕೆಳಗೆ ಯಾ ಮೇಲೆ, ಹಬ್ಬಿರುವ, ಹಲವೊಮ್ಮೆ ಹವಳದ ರಾಶಿಯಿಂದಾದ) ಬಂಡೆ ಯಾ ಬಂಡೆಯ ಸಾಲು.
  2. (ರೂಪಕವಾಗಿ) ಅಪಾಯಕರವಾದ–ಅಡ್ಡಿ, ಅಡಚಣೆ.
  3. ಅದುರಿನಲ್ಲಿರುವ ಲೋಹದ ಎಳೆ, ರೇಖೆ.
  4. ಲೋಹದ ಎಳೆಯ ಸುತ್ತಲಿರುವ ಅದುರಿನ ಆಧಾರ ಶಿಲೆ.