reedy ರೀಡಿ
ಗುಣವಾಚಕ
( ತರರೂಪ reedier\ ತಮರೂಪ reediest).
  1. ಹೊರವಾಗಿ ಜೊಂಡು ಬೆಳೆದಿರುವ; ಜೊಂಡುತುಂಬಿದ.
  2. (ಮುಖ್ಯವಾಗಿ ಕಾವ್ಯಪ್ರಯೋಗ) ಲಾಳದ ಕಡ್ಡಿಯಿಂದ ಮಾಡಿದ: reedy pipe ಲಾಳಗಡ್ಡಿಯ ಪಿಳ್ಳಂಗೋವಿ, ಕೊಳಲು. reedy couch ಲಾಳಗಡ್ಡಿಯಿಂದ, ಹುಲ್ಲಿನಿಂದ ಹೆಣೆದ (ಚಾಪೆ ಮೊದಲಾದ) ಹಾಸು, ಹಾಸಿಗೆ.
  3. ಜೊಂಡಿನಂಥ:
    1. (ತೆಳುವಿನಲ್ಲಿ, ದುರ್ಬಲತೆಯಲ್ಲಿ) ಜೊಂಡಿನಂತೆ ತೆಳುವಾದ ಯಾ ದುರ್ಬಲವಾದ.
    2. (ಹುಲ್ಲಿನ ವಿಷಯದಲ್ಲಿ) ಜೊಂಡಿನಂತೆ ದಪ್ಪವಾದ.
  4. (ಧ್ವನಿಯ ವಿಷಯದಲ್ಲಿ) ಕೊಳಲಿನಂತೆ ಕೀರಲಾದ; ಪೀಪಿಯಂತೆ ಕೊಂಯ್‍ ಎನ್ನುವ; ಟೊಳ್ಳು ಕೊಳಲಂತೆ ಒಡಕುಸ್ವರದ.