reduce ರಿಡ್ಯೂಸ್‍
ಸಕರ್ಮಕ ಕ್ರಿಯಾಪದ
  1. (ಶಸ್ತ್ರವೈದ್ಯ) (ಅವಯವ ಮೊದಲಾದವನ್ನು) ಪುನಃಸ್ಥಾಪಿಸು; ಯಥಾಸ್ಥಾನದಲ್ಲಿ ಯಾ ಯುಕ್ತಸ್ಥಾನದಲ್ಲಿ ಮತ್ತೆ ಇರಿಸು ಯಾ ಸ್ಥಾಪಿಸು ಯಾ ತನ್ಮೂಲಕ ಸರಿಪಡಿಸು: he had his shoulder reduced ಆತ ತನ್ನ ಭುಜವನ್ನು (ಸ್ವಸ್ಥಾನಕ್ಕೆ ಬರುವಂತೆ) ಸರಿಪಡಿಸಿಕೊಂಡ.
  2. (ಪೂರ್ವಸ್ಥಿತಿಗೆ ಮತ್ತೆ ತರು;) ಒಳಪಡಿಸು: reduce person to discipline ವ್ಯಕ್ತಿಯನ್ನು ಶಿಸ್ತಿಗೆ ಮತ್ತೆ ಒಳಪಡಿಸು.
  3. (ಮನಸಾ ಯಾ ಕಾರ್ಯತಃ) ಬೇರೊಂದು ರೂಪಕ್ಕೆ ತರು, ಇಳಿಸು; ರೂಪಾಂತರಗೊಳಿಸು: reduce rule to practice ನಿಯಮವನ್ನು ಜಾರಿಗೆ ತರು, ಆಚರಣೆಗೆ ತರು. reduce anomalies to the rule ವ್ಯತಿಕ್ರಮಗಳನ್ನು ಏಕಸೂತ್ರಕ್ಕಿಳಿಸು. reduce dissimilar quantities to one denomination ಬೇರೆಬೇರೆ ಜಾತಿಯ ಸಂಖ್ಯೆಗಳನ್ನು ಯಾ ರಾಶಿಗಳನ್ನು ಏಕಜಾತಿಗೆ, ಏಕರೂಪಕ್ಕೆ ತರು. reduce one’s thoughts to writing ತನ್ನ ಮನಸ್ಸಿನ ಅಲೋಚನೆಗಳನ್ನು ಬರೆಹಕ್ಕಿಳಿಸು.
  4. (ಯಾವುದಕ್ಕೇ ಹೊಂದುವಂತೆ) ಹದಕ್ಕೆ ತರು; ಹದಗೊಳಿಸು; ಹಸನುಗೊಳಿಸು: reduce surface by harrowing ಕುಂಟೆ ಹೊಡೆದು ನೆಲವನ್ನು ಹದಗೊಳಿಸು.
  5. ವರ್ಗೀಕರಣದಿಂದ ಯಾ ವಿಶ್ಲೇಷಣದಿಂದ ಬೇಕಾದ ರೂಪಕ್ಕೆ ಇಳಿಸು: the facts may all be reduced to three heads ಈ ವಿಷಯಗಳನ್ನೆಲ್ಲ ಮೂರು ವರ್ಗಗಳಾಗಿ ವಿಶ್ಲೇಷಿಸಬಹುದು ಯಾ ಮೂರು ಗುಂಪುಗಳಾಗಿ ವಿಂಗಡಿಸಬಹುದು.
  6. ( ಅಕರ್ಮಕ ಕ್ರಿಯಾಪದ ಸಹ) (ರಸಾಯನವಿಜ್ಞಾನ) ಅಪಕರ್ಷಿಸು:
    1. (ಆಕ್ಸೈಡನ್ನು) ಕಡಮೆ ಆಕ್ಸಿಜನ್ನಿರುವ ಯಾ ಆಕ್ಸಿಜನ್‍ರಹಿತ ಸ್ಥಿತಿಗೆ ಪರಿವರ್ತಿಸು.
    2. ಹೈಡ್ರೊಜನ್‍ ಸೇರಿಸು.
    3. ಇಲೆಕ್ಟ್ರಾನ್‍ಗಳನ್ನು ಸೇರಿಸು.
  7. (ವಿರಳ ಪ್ರಯೋಗ) (ಯಾವುದೇ ಕೆಲಸ ಮಾಡಲು) ಬಲಾತ್ಕರಿಸು; ಬಲವಂತ ಮಾಡು.
  8. (ಬಲಪ್ರಯೋಗದಿಂದ, ಯಾ ಅನಿವಾರ್ಯ ಪರಿಸ್ಥಿತಿಯನ್ನು ಕಲ್ಪಿಸಿ, ವ್ಯಕ್ತಿಯನ್ನು) ಒಂದು ಸ್ಥಿತಿಗೆ ತರು, ಇಳಿಸು; ಅಡಗಿಸು; ಹೇಳಿದ್ದನ್ನು ಮಾಡುವ ಸ್ಥಿತಿಗೆ ತರು; ಪರಾಧೀನ ಸ್ಥಿತಿಗೆ ತರು: reduce the Crown to submission to the Parliament ರಾಜನನ್ನು ಪಾರ್ಲಿಮೆಂಟಿಗೆ ಮಣಿಯುವ ಸ್ಥಿತಿಗೆ ತರು. reduce to despair ನಿರಾಶೆಯ ಸ್ಥಿತಿಗೆ ತರು.
    1. ಕೆಳಕ್ಕೆ, ಕೆಳಮಟ್ಟಕ್ಕೆ–ಇಳಿಸು, ತರು; ಕೆಳದರ್ಜೆಗೆ ಇಳಿಸು: reduce pope to a chief bishop ಪೋಪನನ್ನು ಪ್ರಧಾನ ಬಿಷಪ್‍ನ ದರ್ಜೆಗೆ ಇಳಿಸು.
  9. ತಗ್ಗಿಸು; ಕಡಮೆ ಮಾಡು; ಇಳಿಸು: this reduces the temperature ಇದು ತಾಪವನ್ನು ತಗ್ಗಿಸುತ್ತದೆ. reduced prices ತಗ್ಗಿದ ಬೆಲೆಗಳು. I have reduced my outfit to almost nothing ನಾನು ನನ್ನ ಬಟ್ಟೆಬರೆಯನ್ನು ಹೆಚ್ಚು ಕಡಮೆ ಇಲ್ಲವೇ ಇಲ್ಲವೆಂಬಷ್ಟಕ್ಕೆ ಕಡಮೆ ಮಾಡಿದ್ದೇನೆ.
  10. ಬಡತನಕ್ಕಿಳಿಸು.
  11. ಸಂಕೋಚಿಸು; ಕುಗ್ಗಿಸು; ಕುಗ್ಗಿಸಿಕೊ: he reduced himself to the least possible compass ಅವನು ತನ್ನನ್ನು ಕನಿಷ್ಠತಮ ಪ್ರಮಾಣಕ್ಕೆ, ಗಾತ್ರಕ್ಕೆ ಕುಗ್ಗಿಸಿಕೊಂಡ.
  12. ದುರ್ಬಲಗೊಳಿಸು; ನಿಶ್ಯಕ್ತ ಮಾಡು : is in a reduced state ನಿಶ್ಯಕ್ತಸ್ಥಿತಿಯಲ್ಲಿದ್ದಾನೆ.
  13. (ಅಡುಗೆಯಲ್ಲಿ) (ಹೆಚ್ಚಿನ ದ್ರವನ್ನು) ಕುದಿಸಿ ಇಂಗಿಸು.
  14. (ಗಣಿತ) ಸರಳೀಕರಿಸು; (ಭಿನ್ನರಾಶಿಯನ್ನು) ಅತ್ಯಂತ ಕಡಮೆ ಛೇದವಿರುವ ರೂಪಕ್ಕೆ ಪರಿವರ್ತಿಸು.
  15. (ಛಾಯಾಚಿತ್ರಣ) (ವಿಷಮ ಚಿತ್ರದ ಯಾ ಸಮಚಿತ್ರದ) ನಿಷ್ಪಾರಕತೆಯನ್ನು–ಕಡಮೆಮಾಡು, ತಿಳಿಗೊಳಿಸು.
ಅಕರ್ಮಕ ಕ್ರಿಯಾಪದ
  1. (ತನ್ನ) ತೂಕವನ್ನು ಯಾ ಗಾತ್ರವನ್ನು ಕಡಮೆ ಮಾಡಿಕೊ; ತೂಕ ಇಳಿಸಿಕೊ.
  2. ಸಣ್ಣದಾಗು; ಕಿರಿದಾಗು; ಕುಗ್ಗು.
ಪದಗುಚ್ಛ

reduced circumstances ಸಾಕಷ್ಟು ಶ್ರೀಮಂತಿಕೆಯಿಂದ ಬಡತನಕ್ಕಿಳಿದ ಸ್ಥಿತಿ; ದಾರಿದ್ರ್ಯ.