redound ರಿಡೌಂಡ್‍
ಅಕರ್ಮಕ ಕ್ರಿಯಾಪದ
  1. (ವ್ಯಕ್ತಿಯ ಅನುಕೂಲ, ಕೀರ್ತಿ, ಮೊದಲಾದವಕ್ಕೆ) ಸಹಾಯಕವಾಗು; ಸಾಧಕವಾಗು: thus procedure will redound to our advantage ಈ ಕಾರ್ಯ ವಿಧಾನವು ನಮ್ಮ ಅನುಕೂಲಕ್ಕೆ ಸಾಧಕವಾಗುತ್ತದೆ. the facts redound to their credit ಈ ಸತ್ಯಾಂಶಗಳು, ಸಂಗತಿಗಳು, ಅವರ ಕೀರ್ತಿಗೆ ಸಹಾಯಕವಾಗುತ್ತವೆ.
  2. ಅಂತಿಮ ಫಲವಾಗಿ (ವ್ಯಕ್ತಿಗೆ) ಹಿಂದಿರುಗು: the benefits redound to us from his self-sacrifice ಆತನ ಆತ್ಮತ್ಯಾಗದಿಂದ ನಮಗೆ ಈ ಲಾಭಗಳು ಅಂತಿಮ ಫಲವಾಗಿ ಬಂದಿವೆ.
  3. (ತನ್ನ ಕೃತ್ಯವು) ತನಗೇ ತಿರುಗಿಬರು: his follies will at last redound to his disgrace ಅವನ ಅವಿವೇಕಗಳು ಕಡೆಗೆ ಅವನಿಗೇ ಅವಮಾನ ತರುತ್ತವೆ.