redemption ರಿಡೆಂಪ್ಷನ್‍
ನಾಮವಾಚಕ
  1. (ಮುಖ್ಯವಾಗಿ ಯೇಸುಕ್ರಿಸ್ತನು ಲೋಕೋದ್ಧಾರಕ್ಕಾಗಿ ತಾನು ಮಾಡಿಕೊಂಡ ಪ್ರಾಯಶ್ಚಿತ್ತ ಬಲಿಯಿಂದ) ಪಾಪ ನರಕಗಳಿಂದ ವಿಮೋಚನೆ: past redemption (ಪಾಪ) ವಿಮೋಚನೆಗೆ ಮೀರಿ; ವಿಮೋಚನೆಯೇ ಸಾಧ್ಯವಿಲ್ಲದೆ.
  2. ಬಿಡುಗಡೆಗೊಳಿಸಲು ಯಾ ವಿಮೋಚನೆಗೊಳಿಸಲು ಕಾರಣವಾದದ್ದು; ಉದ್ಧಾರಕಾರಣ: that punishment proved his redemption ಆ ದಂಡನೆಯೇ ಅವನ ವಿಮೋಚನಕ್ಕೆ ಕಾರಣವಾಗಿ ಪರಿಣಮಿಸಿತು.
  3. (ಬ್ರಿಟಿಷ್‍ ಪ್ರಯೋಗ) ಕೊಳ್ಳುವುದು; ಕೊಂಡುಕೊಳ್ಳುವಿಕೆ; ಕ್ರಯಕ್ಕೆ ತೆಗೆದುಕೊಳ್ಳುವುದು: he became a member of the company by redemption ಅವನು ಆ ವಾಣಿಜ್ಯ ಸಂಸ್ಥೆಯ ಸದಸ್ಯತ್ವವನ್ನು ಕ್ರಯಕ್ಕೆ ತೆಗೆದುಕೊಂಡ.
ಪದಗುಚ್ಛ

in the year of our redemption 1978 ಕ್ರಿಸ್ತಶಕ 1978ರಲ್ಲಿ.