redeem ರಿಡೀಮ್‍
ಸಕರ್ಮಕ ಕ್ರಿಯಾಪದ
  1. (ಪ್ರಯತ್ನಮಾಡಿ ಯಾ ಹಾಕಲಾದ ಷರತ್ತಿನ ಹಣ ಸಲ್ಲಿಸಿ ತನ್ನ ವಸ್ತುವನ್ನು ಯಾ ಹಕ್ಕನ್ನು) ಬಿಡಿಸಿಕೊ; ಪುನಃ ಪಡೆದುಕೊ; ಮತ್ತೆ ಗಳಿಸಿಕೊ: redeem one’s rights ತನ್ನ ಹಕ್ಕುಗಳನ್ನು ಪುನಃ ಪಡೆದುಕೊ. redeem one’s mortgage ಭೋಗ್ಯಮಾಡಿದ್ದ ವಸ್ತುವನ್ನು ಬಿಡಿಸಿಕೊ. redeem pledged goods ಒತ್ತೆ ಇಟ್ಟಿದ್ದ ಮಾಲುಗಳನ್ನು ಬಿಡಿಸಿಕೊ. redeem one’s position ತನ್ನ ಸ್ಥಾನವನ್ನು ಪುನಃ ಪಡೆದುಕೊ.
  2. (ಹೆಸರು, ಶೀಲ, ವರ್ತನೆ ಮೊದಲಾದವನ್ನು) ಸಂರಕ್ಷಿಸು; ಉಳಿಸು; ಸಮರ್ಥಿಸು; ನಿರ್ದೋಷವಾಗಿಸು: redeem one’s honour ಮರ್ಯಾದೆಯನ್ನು ಉಳಿಸಿಕೊ.
    1. (ಆಪಾದನೆ, ದೂರು ಯಾ ಸಾಲದಿಂದ) ಹಣ ತೆತ್ತು–ವಿಮುಕ್ತನಾಗು, ಪಾರಾಗು, ಬಿಡುಗಡೆ ಪಡೆ.
    2. ಹಾಗೆ ಬಿಡುಗಡೆ ಪಡೆಯಲು ಒಂದೇ ಕಂತಿನಲ್ಲಿ ಹಣ–ತೆರು, ಪೂರೈಸು.
  3. ಕೊಟ್ಟ ಮಾತನ್ನು, ವಾಗ್ದಾನವನ್ನು–ನೆರವೇರಿಸು, ಪೂರೈಸು, ನಡೆಸು.
  4. (ಬಿಡುಗಡೆಯ ಧನ ತೆತ್ತು ಒಬ್ಬನನ್ನು ಯಾ ತನ್ನನ್ನೇ) ಬಿಡಿಸಿಕೊ; ಬಿಡುಗಡೆ ಮಾಡಿಕೊ; ವಿಮೋಚನಗೊಳಿಸಿಕೊ.
  5. ಹಣತೆತ್ತು (ಒಬ್ಬನ ಪ್ರಾಣವನ್ನು) ಉಳಿಸು.
  6. (ಒಬ್ಬನನ್ನು) ಉದ್ಧರಿಸು; ಸನ್ಮಾರ್ಗಕ್ಕೆ ತರು.
  7. (ದೇವರ ಯಾ ಕ್ರಿಸ್ತನ ವಿಷಯದಲ್ಲಿ) ಪಾತಕ ನಿವಾರಣೆ ಮಾಡು; ನರಕ ತಪ್ಪಿಸು; ಪುನೀತಗೊಳಿಸು.
  8. (ತಪ್ಪು ಯಾ ದೋಷವನ್ನು) ತೊಲಗಿಸು; (ಕುಂದುಕೊರತೆಯನ್ನು) ನಿವಾರಿಸು.
  9. ದೋಷವನ್ನು ಮರೆಸು: it has one redeeming feature ಅದರಲ್ಲಿ ದೋಷವನ್ನು ಮರೆಸುವ ಒಂದು ಅಂಶವಿದೆ. the eyes redeem the face from ugliness ಆ ಕಣ್ಣುಗಳು ಮುಖದ ಕುರೂಪವನ್ನು ನಿವಾರಿಸುತ್ತವೆ.
  10. (ಟೋಕನ್‍ಗಳು ಯಾ ಬಾಂಡ್‍ಗಳನ್ನು) ಸರಕಾಗಿ ಯಾ ನಗದಾಗಿ ಪರಿವರ್ತಿಸು.