recur ರಿಕರ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ recurred; ವರ್ತಮಾನ ಕೃದಂತ recurring).
  1. (ಆಲೋಚನೆಯಲ್ಲಿ ಯಾ ಮಾತಿನಲ್ಲಿ) ಹಿಂದೆ ಹೇಳಿದ್ದಕ್ಕೆ ಯಾ ಅಲೋಚಿಸಿದ್ದಕ್ಕೆ ಮರಳು; ಮತ್ತೆ ನೆನೆ ಯಾ ಪುನಃ ಪ್ರಸ್ತಾಪಿಸು: it was painful for her to recur to that terrible time ಆ ಭಯಂಕರವಾದ ಕಾಲವನ್ನು ಮತ್ತೆ ನೆನೆಯುವುದು, ಪುನಃ ಪ್ರಸ್ತಾಪಿಸುವುದು, ಆಕೆಗೊಂದು ಯಾತನೆಯಾಗಿತ್ತು. I must now recur to my former point ಈಗ ನಾನು ಹಿಂದೆ ಹೇಳಿದ ಅಂಶಕ್ಕೆ ಮರಳಬೇಕು.
  2. (ಭಾವನೆ ಮೊದಲಾದವುಗಳ ವಿಷಯದಲ್ಲಿ) ಪುನಃ ಮನಸ್ಸಿಗೆ ಯಾ ನೆನಪಿಗೆ ಬರು; ಮತ್ತೆ ನೆನಪಾಗು; ಮತ್ತೆ ಸ್ಮರಣೆಗೆ ಬರು: the story recurs to my mind ಆ ಕಥೆ ನನಗೆ ನೆನಪಾಗುತ್ತದೆ.
  3. (ಸಮಸ್ಯೆ ಮೊದಲಾದವುಗಳ ವಿಷಯದಲ್ಲಿ) ಪುನಃ ಹುಟ್ಟು, ಉದ್ಭವಿಸು; ಮರುಕಳಿಸು.
  4. ಮತ್ತೆಮತ್ತೆ ಬರುತ್ತಿರು; ಆವರ್ತಿಸು.