rectify ರೆಕ್ಟಿಹೈ
ಸಕರ್ಮಕ ಕ್ರಿಯಾಪದ

(ವರ್ತಮಾನ ಪ್ರಥಮ ಪುರುಷ ಏಕವಚನ rectifies; ಭೂತರೂಪ ಮತ್ತು ಭೂತಕೃದಂತ rectified).

  1. (ವಿಧಾನ, ಲೆಕ್ಕಾಚಾರ, ಹೇಳಿಕೆ, ಸ್ಥಿತಿ, ಉಪಕರಣ ಮೊದಲಾದವನ್ನು)
    1. ಸರಿಪಡಿಸು; ನೇರ್ಪಡಿಸು; ಕ್ರಮಪಡಿಸು; ಸುಧಾರಿಸು; ತಿದ್ದು.
    2. ಸರಿಹೊಂದಿಸು.
  2. (ಅನ್ಯಾಯ, ಅಸಂಗತ ಸ್ಥಿತಿ, ತಪ್ಪು, ದೋಷ, ಲೋಪ, ದೂರು ಮೊದಲಾದವನ್ನು) ನಿವಾರಿಸು; ಪರಿಹರಿಸು; ತಿದ್ದಿ ಸರಿಮಾಡು.
  3. (ರಸಾಯನವಿಜ್ಞಾನ) ಶುದ್ಧೀಕರಿಸು; ಮತ್ತೆ ಮತ್ತೆ ಆಸವನಮಾಡಿ ಶುದ್ಧೀಕರಿಸು ಯಾ ಸಂಸ್ಕರಿಸು.
  4. (ಜ್ಯಾಮಿತಿ) ನೀಳಕಲನಿಸು; (ಒಂದು ವಕ್ರಕ್ಕೆ) ಸಮ ಉದ್ದವಿರುವ ಸರಳರೇಖೆಯನ್ನು ಎಳೆ.
  5. (ವಿದ್ಯುದ್ವಿಜ್ಞಾನ) ದಿಷ್ಟೀಕರಿಸು; (ಪರ್ಯಾಯ ವಿದ್ಯುತ್ಪ್ರವಾಹವನ್ನು) ನೇರಪ್ರವಾಹವಾಗಿ ಪರಿವರ್ತಿಸು.