recreate ರೆಕ್ರಿಏಟ್‍
ಸಕರ್ಮಕ ಕ್ರಿಯಾಪದ

(ಆಟ, ವಿನೋದ, ವಿಶ್ರಾಂತಿ, ರಜಾ, ಹವ್ಯಾಸ, ಉದ್ಯೋಗ, ಮೊದಲಾದವುಗಳ ವಿಷಯದಲ್ಲಿ) ಉಲ್ಲಾಸಗೊಳಿಸು; ನವಚೈತನ್ಯ ಮೂಡಿಸು; ಹರ್ಷಗೊಳಿಸು; ಹಿತಕರವಾಗಿರು (ಆತ್ಮಾರ್ಥಕ): he recreates himself with cricket ಅವನು ಕ್ರಿಕೆಟ್‍ ಮೂಲಕ ಉಲ್ಲಾಸ ತಂದು ಕೊಳ್ಳುತ್ತಾನೆ, ಉಲ್ಲಾಸ ಹೊಂದುತ್ತಾನೆ.

ಅಕರ್ಮಕ ಕ್ರಿಯಾಪದ

ವಿನೋದಗೊಳ್ಳು; ಉಲ್ಲಾಸದಲ್ಲಿ ಹೊತ್ತುಕಳೆ; ಕ್ರೀಡೆ, ವಿನೋದ, ಮೊದಲಾದವುಗಳಲ್ಲಿ ನಿರತನಾಗಿರು.