recovery ರಿಕವರಿ
ನಾಮವಾಚಕ
(ಬಹುವಚನ recoveries).
  1. (ಕಳೆದುಹೋಗಿದ್ದುದನ್ನು) ಪುನಃ ಪಡೆದುಕೊಳ್ಳುವುದು; ಪುನರ್ವಶ; ಪುನಸ್ಸಂಪಾದನೆ; ಪುನರ್ಲಾಭ.
  2. (ಕಳೆದುಹೋಗಿದ್ದ) ಆರೋಗ್ಯವನ್ನು ಪುನಃ ಹೊಂದುವುದು; ಆರೋಗ್ಯಲಾಭ.
  3. ಸ್ವಸ್ಥಿತಿಗೆ ಯಾ ಪೂರ್ವಸ್ಥಿತಿಗೆ–ಬರುವುದು ಯಾ ತರುವುದು.
  4. ಪುನರ್ಲಾಭ; ಪುನಃ ಪಡೆದ ವಸ್ತು.
  5. (ತ್ಯಾಜ್ಯ ಯಾ ಅವಶಿಷ್ಟ ವಸ್ತುಗಳಿಂದ) ಉಪಯೋಗಾರ್ಹ ವಸ್ತುವನ್ನು ಪುನಃ ಪಡೆಯುವುದು.
  6. (ನ್ಯಾಯಶಾಸ್ತ್ರ) ಆಸ್ತಿಯ ಸುಪರ್ದನ್ನು ಯಾ ನಷ್ಟ, ಅನ್ಯಾಯಗಳ, ಪರಿಹಾರವನ್ನು ಪಡೆದುಕೊಳ್ಳುವುದು.
  7. (ಕ್ರೀಡೆ) (ಸೋಲಿನ ಸ್ಥಿತಿಯಿಂದ) ಚೇತರಿಸಿಕೊಳ್ಳುವುದು.
  8. (ದೋಣಿ ನಡೆಸುವುದರಲ್ಲಿ) ಮುಂದಿನ ಹುಟ್ಟು ಹೊಡೆಯುವ ಸಲುವಾಗಿ ಹಿಂದಿನ ಸ್ಥಿತಿಗೆ ಬರುವುದು.
  9. (ಕತ್ತಿಯ ವರಿಸೆ) ಕತ್ತಿ ಬೀಸಿದ ಬಳಿಕ ಆತ್ಮರಕ್ಷಣೆಯ ನೆಲೆಗೆ (ಕತ್ತಿಯನ್ನೂ ತನ್ನನ್ನೂ) ತಂದುಕೊಳ್ಳುವುದು.
  10. (ಗಾಲ್‍) ಚೆಂಡನ್ನು ಬದ್ದು, ಮರಳುಗುಳಿ (bunker) ಮೊದಲಾದವುಗಳಿಂದ ಹೊರತರಲು ಹೊಡೆಯುವ ಹೊಡೆತ.