See also 2recover
1recover ರಿಕವರ್‍
ಸಕರ್ಮಕ ಕ್ರಿಯಾಪದ
  1. (ಕಳೆದುಕೊಂಡಿದ್ದುದರ ಸ್ವಾಮ್ಯ, ಸ್ವಾಧೀನ, ಸುಪರ್ದು, ಮೊದಲಾದವನ್ನು) ಪುನಃ ಪಡೆದುಕೊ: he has recovered his kingdom (ಕಳೆದುಕೊಂಡಿದ್ದ) ರಾಜ್ಯವನ್ನು ಪುನಃ ಪಡೆದುಕೊಂಡ.
  2. ಪುನಃ ಕಂಡುಹಿಡಿ: he recovered the meaning of the hieroglyphs ಆ ಚಿತ್ರಲಿಪಿಯ ಅರ್ಥವನ್ನವನು ಪುನಃ ಕಂಡುಹಿಡಿದ.
  3. (ತಪ್ಪಿಹೋಗಿದ್ದ ದಾರಿಯನ್ನು) ಪುನಃ ಕಂಡುಕೊ ಪತ್ತೆಹಚ್ಚು: he recovered the track (ತಪ್ಪಿಹೋಗಿದ್ದ) ದಾರಿಯನ್ನು ಪುನಃ ಕಂಡುಕೊಂಡ.
  4. (ಆರೋಗ್ಯ, ಸ್ವಾಸ್ಥ್ಯ, ಪ್ರಜ್ಞೆ, ಹಸಿವು, ಮೊದಲಾದವನ್ನು)
    1. ಪುನಃ ಪಡೆದುಕೊ: he recovered his health (ಕಳೆದುಕೊಂಡಿದ್ದ ಆರೋಗ್ಯವನ್ನವನು ಪುನಃ ಪಡೆದುಕೊಂಡ.)
    2. ಪಡೆಯುವಂತೆ ಮಾಡು: a dash of cold water recovered her ಸ್ವಲ್ಪ ತಣ್ಣೀರೆರಚಿದ್ದರಿಂದ ಅವಳು ಪ್ರಜ್ಞೆ ಪಡೆದುಕೊಂಡಳು.
  5. (ಕುಗ್ಗಿಹೋಗಿದ್ದ ಧ್ವನಿಯನ್ನು) ಪುನಃ ಪಡೆದುಕೊ: he recovered his voice (ಕುಗ್ಗಿಹೋಗಿದ್ದ) ಧ್ವನಿಯನ್ನು ಅವನು ಪುನಃ ಪಡೆದುಕೊಂಡ.
  6. (ವಶ ತಪ್ಪಿಹೋಗಿದ್ದುದನ್ನು) ಪುನಃ ವಶ ಪಡಿಸಿಕೊ: they recovered much land from the sea (ಸಮುದ್ರದ ಪಾಲಾಗಿದ್ದ) ತುಂಬ ಭೂಮಿಯನ್ನು ಅವರು ಪುನಃ ವಶಕ್ಕೆ ತಂದುಕೊಂಡರು.
  7. (ಮೊಕದ್ದಮೆ ನಡೆಸಿ ಕೋರ್ಟಿನ ಮೂಲಕ) ಆಸ್ತಿಯ ಸುಪರ್ದನ್ನು ಯಾ ನಷ್ಟದ, ಅನ್ಯಾಯದ ಪರಿಹಾರವನ್ನು ಪಡೆದುಕೊ: plaintiff shall recover according to verdict ತೀರ್ಪಿನ ಪ್ರಕಾರ ವಾದಿಯು ಸುಪರ್ದನ್ನು ಪಡೆಯತಕ್ಕದ್ದು. an action to recover damages for false imprisonment ಸುಳ್ಳು ಆಪಾದನೆ ಹೊರಿಸಿ ಸೆರೆಮನೆಗೆ ಕಳುಹಿಸಿದ ಅನ್ಯಾಯಕ್ಕಾಗಿ ಪರಿಹಾರ ಪಡೆದುಕೊಳ್ಳಲು ಹೂಡಿದ ಮೊಕದ್ದಮೆ.
  8. (ಆತ್ಮಾರ್ಥಕ) (ಪ್ರಾಣ, ಪ್ರಜ್ಞೆ, ಸ್ವಾಸ್ಥ್ಯ, ಅಂಗಗಳ ಮೇಲೆ ಹತೋಟಿ, ಮೊದಲಾದವನ್ನು) ಪಡೆದುಕೊ; ಚೇತರಿಸಿಕೊ.
  9. (ಕಳೆದುಹೋಗಿದ್ದುದನ್ನು) ಪುನಃ ಪಡೆದುಕೊ; (ನಷ್ಟವನ್ನು) ತುಂಬಿಕೊ, ಪರಿಹರಿಸಿಕೊ: recovered his losses ತನ್ನ ನಷ್ಟಗಳನ್ನು ಅವನು ತುಂಬಿಕೊಂಡ.
  10. (ದುಷ್ಪರಿಣಾಮದಿಂದ) ಪಾರಾಗು; ಮುಕ್ತನಾಗು; ಚೇತರಿಸಿಕೊ: he never recovered from the blow ಆ ಏಟಿನಿಂದ ಅವನು ಚೇತರಿಸಿಕೊಳ್ಳಲೇ ಇಲ್ಲ.
  11. (ವಿರಳ ಪ್ರಯೋಗ) ಮತ್ತೆ (ಸ್ವಸ್ಥಾನಕ್ಕೆ ಯಾ ಹಿಂದಿನ ಸ್ಥಾನಕ್ಕೆ) ಹಿಂದಿರುಗು: he recovered the shore with difficulty ಪ್ರಯಾಸದಿಂದ ಅವನು ಮತ್ತೆ ತೀರಕ್ಕೆ ಹಿಂದಿರುಗಿದ.
  12. ಕೈಗಾರಿಕೆಯ ತ್ಯಾಜ್ಯ ವಸ್ತುವಿನಿಂದ (ಪುನಃ ಬಳಸಬಹುದಾದ ವಸ್ತುಗಳನ್ನು) ಪಡೆ.
ಅಕರ್ಮಕ ಕ್ರಿಯಾಪದ

(ಪ್ರಾಣ, ಪ್ರಜ್ಞೆ, ಸ್ವಾಸ್ಥ್ಯ ಮೊದಲಾದವನ್ನು ಪಡೆದುಕೊಂಡು) ಚೇತರಿಸಿಕೊ; ಸ್ವಸ್ಥಿತಿಗೆ ಬರು; ಸ್ವಾಸ್ಥ್ಯ ಪಡೆ; ಗುಣಹೊಂದು: I have recovered from a long illness ದೀರ್ಘಕಾಲದ ಕಾಯಿಲೆಯಿಂದ ನಾನು ಗುಣಹೊಂದಿದೆ. the country never rocovered from the famine ದೇಶ ಕ್ಷಾಮದಿಂದ ಚೇತರಿಸಿಕೊಳ್ಳಲೇ ಇಲ್ಲ. he sat down to recover from his agitation ದುಗುಡದಿಂದ ಸ್ವಸ್ಥಿತಿಗೆ ಬರಲು ಅವನು ಕುಳಿತುಕೊಂಡ. he recovered slowly ಆತನಿಗೆ ನಿಧಾನವಾಗಿ ಗುಣವಾಯಿತು.

ಪದಗುಚ್ಛ
  1. recover oneself
    1. ಮೂರ್ಛೆಯಿಂದ ಎಚ್ಚೆತ್ತುಕೊ; ಪ್ರಜ್ಞೆಯನ್ನು ಪುನಃ ಪಡೆ.
    2. ಅಂಗಾಂಗಗಳ ಸ್ವಾಧೀನ ಪಡೆದುಕೊ.
    3. ಶಾಂತಸ್ಥಿತಿಯನ್ನು ಪುನಃ ಪಡೆ; ಸಮಾಧಾನ ಸ್ಥಿತಿಗೆ ಮತ್ತೆ ಬರು; ಮನಸ್ಸನ್ನು ಸ್ತಿಮಿತ ಮಾಡಿಕೊ; ಸ್ಥಿರಮನಸ್ಕನಾಗು.
    4. (ಕಷ್ಟ, ನಷ್ಟ, ತಪ್ಪು ಮೊದಲಾದವುಗಳಿಂದ) ಚೇತರಿಸಿಕೊ; ಸುರಕ್ಷಿತಸ್ಥಿತಿಗೆ ಬರು.
  2. recover one’s feet (or legs) (ಬಿದ್ದಿದ್ದ ವ್ಯಕ್ತಿಯ ವಿಷಯದಲ್ಲಿ) ಎದ್ದುನಿಲ್ಲು.
  3. recover one’s sword
    1. (ತಿವಿದಿದ್ದ) ಕತ್ತಿಯನ್ನು ಹಿಂದಕ್ಕೆ ಎಳೆದುಕೊ.
    2. (ಸೈನ್ಯ) ಕತ್ತಿಯ (ಹಿಡಿಯು ಮುಖಕ್ಕೆದುರಾಗಿರುವಂತೆ) ಕತ್ತಿಯನ್ನು ನೆಟ್ಟಗೆ ಎತ್ತಿ ಹಿಡಿದುಕೊ.
See also 1recover
2recover ರಿಕವರ್‍
ನಾಮವಾಚಕ

(ಕತ್ತಿವರಸೆ ಮೊದಲಾದವುಗಳಲ್ಲಿ) ಒಂದು ಸುತ್ತಾದ ಬಳಿಕ ಕತ್ತಿಯನ್ನು

  1. ಹಿಂದಿನ ನೆಲೆಗೆ ತರುವುದು.
  2. ಆ ಸ್ಥಾನ.