recorder ರಿಕಾರ್ಡರ್‍
ನಾಮವಾಚಕ
  1. ದಾಖಲೆದಾರ; ದಹ್ತರ ಲೇಖಕ; ಕಚೇರಿ ಮೊದಲಾದವುಗಳಲ್ಲಿ ದಾಖಲೆಗಳನ್ನು ಬೆರುಯುವವನು, ಇಡುವವನು.
  2. (ಬ್ರಿಟಿಷ್‍ ಪ್ರಯೋಗ) (ನ್ಯಾಯಶಾಸ್ತ್ರ) ರಿಕಾರ್ಡರ್‍:
    1. ನಗರದ ಯಾ ಜಿಲ್ಲೆಯ ಕೋರ್ಟಿನ ನ್ಯಾಯಾಧಿಪತಿ.
    2. (ಹಿಂದೆ) ಅರೆಕಾಲಿಕ ನ್ಯಾಯಾಧೀಶನಾಗಿ ನೇಮಕವಾಗಿರುತ್ತಿದ್ದ ಅನುಭವಿ ವಕೀಲ.
  3. ರಿಕಾರ್ಡರು; ಧ್ವನಿಮುದ್ರಕ; ಧ್ವನಿಗಳನ್ನು ದಾಖಲೆ ಮಾಡಿಕೊಳ್ಳುವ ಯಂತ್ರ, ಸಾಧನ.
  4. (ಸಂಗೀತ) ರಿಕಾರ್ಡರ್‍; ಹೊರತುದಿಯ ಬಾಯಿ ಅಗಲವಾಗಿರುವ, ಓಲಗದಂಥ ಊದುವ ವಾದ್ಯ. Figure: recorder-4