See also 2record  3record
1record ರಿಕಾರ್ಡ್‍
ಸಕರ್ಮಕ ಕ್ರಿಯಾಪದ
  1. (ಹಕ್ಕಿಗಳ ವಿಷಯದಲ್ಲಿ) (ತಮ್ಮ ಉಲಿಯನ್ನು, ಕೂಗನ್ನು, ತಗ್ಗುದನಿಯಲ್ಲಿ ಹಾಡಿಕೊಳ್ಳುತ್ತ) ಅಭ್ಯಾಸ ಮಾಡು.
  2. (ನೆನಪಿಗಾಗಿ ಯಾ ಪುನರವಲೋಕನಕ್ಕಾಗಿ ಯಾ ಉಲ್ಲೇಖನಕ್ಕಾಗಿ ಯಾವುದನ್ನೇ)
    1. ಬರೆದಿಡು; ನಮೂದಿಸು; ದಾಖಲುಮಾಡಿಡು; ಗುರುತು ಮಾಡಿಡು; ದಾಖಲಿಸಿಡು: he recorded his thoughts ಆತ ತನ್ನ ವಿಚಾರಗಳನ್ನುಬರೆದಿಟ್ಟ.
    2. ಚಿತ್ರಣ, ರೂಪಣ, ಮುದ್ರಣ ಮೊದಲಾದವುಗಳಿಂದ, ಶಾಶ್ವತ ರೂಪದಲ್ಲಿ ಸ್ಥಿರವಾಗಿ ಉಳಿಯುವಂತೆ ಇಡು, ಮುದ್ರಿಸು: the painter recorded his features ಚಿತ್ರಕಾರನು ಆತನ ರೂಪಾಕೃತಿಗಳನ್ನು ಚಿತ್ರಿಸಿದ. his voice was recorded by the phonograph ಹೋನೋಗ್ರಾಹು ಆತನ ಧ್ವನಿಯನ್ನು ಮುದ್ರಿಸಿಟ್ಟಿತು.
    3. ತೋರಿಸು; ಸೂಚಿಸು: the thermometer recorded $10^\circ$ below zero ಉಷ್ಣಮಾಪಕವು ಸೊನ್ನೆಗಿಂತ ಕೆಳಗೆ $10^\circ$ ಯನ್ನು ಸೂಚಿಸಿತು.
  3. (ರೇಡಿಯೋ) (ಮುಂದೆ ಪ್ರಸಾರ ಮಾಡಬೇಕಾದ್ದನ್ನು) ಧ್ವನಿ ಮುದ್ರಿಸು; ರೆಕಾರ್ಡ್‍ ಮಾಡು.
  4. ಗುರ್ತಿಸು; ಗುರುತುಹಾಕು: to record one’s vote ವೋಟನ್ನು ಗುರ್ತಿಸು.
  5. (ಮಾತಿನಲ್ಲಿ, ನಡೆಯಲ್ಲಿ) ಸೂಚಿಸು: he recorded his protest ಆತ ತನ್ನ ಪ್ರತಿಭಟನೆಯನ್ನು ಸೂಚಿಸಿದ.
  6. ದಾಖಲೆ ನೀಡು; ಹೇಳು; ನಿರೂಪಿಸು; ಕಥನಮಾಡು: history records the battle ಆ ಕದನವನ್ನು ಇತಿಹಾಸವು ಹೇಳುತ್ತದೆ.
  7. ಚಾರಿತ್ರಿಕ ಯಾ ಇತರ ಬಗೆಯ ದಾಖಲೆಯಾಗು ಯಾ ದಾಖಲೆ ಸ್ಥಾಪಿಸು.
ಅಕರ್ಮಕ ಕ್ರಿಯಾಪದ

(ಹಕ್ಕಿಗಳ ವಿಷಯದಲ್ಲಿ) ಉಲಿ (ಗುಟ್ಟು).

See also 1record  3record
2record ರೆಕಾರ್ಡ್‍
ನಾಮವಾಚಕ
  1. ದಾಖಲೆ:
    1. ಘಟನೆ, ಹೇಳಿಕೆ ಮೊದಲಾದವುಗಳ (ಮುಖ್ಯವಾಗಿ ಅಧಿಕೃತ) ವರದಿಯ ರೂಪದಲ್ಲಿರುವ ಪುರಾವೆ, ಸಾಕ್ಷ್ಯ ಯಾ ಮಾಹಿತಿ: it is on record ಕಾನೂನಿನ ಪ್ರಕಾರ ಯಾ ಕಾನೂನುಸಮ್ಮತವಾಗಿ ಬರೆದಿಟ್ಟಿದೆ, ದಾಖಲೆಯಾಗಿದೆ, ದಹ್ತರಕ್ಕೆ ಸೇರಿದೆ.
    2. ಇದನ್ನೊಳಗೊಂಡ ಕಡತ, ದಹ್ತರ, ಲಿಖಾವಟ್ಟು.
  2. (ಲಿಖಾವಟ್ಟಿನ ಅದಾಲತ್ತಿನಲ್ಲಿ, ದಾಖಲೆಗಳ ಕೋರ್ಟಿನಲ್ಲಿ, ಜರುಗುತ್ತಿರುವ) ವ್ಯಾಜ್ಯದ ಕಾರ್ಯಕ್ರಮಗಳ ಅಧಿಕೃತ ವರದಿ; ವಾದವಿವಾದಗಳ ಮತ್ತು ತೀರ್ಪಿನ ಲಿಖಿತಪ್ರತಿ; ವ್ಯಾಜ್ಯದ ಮತ್ತು ತೀರ್ಪಿನ ದಾಖಲೆಗಳ ದಹ್ತರ.
  3. ತೀರ್ಪಿಗೆ ಸಾಧಕವಾಗಿ (ಸ್ಥಿರರೂಪದಲ್ಲಿ ಕಾಪಿಟ್ಟಿರುವ ಸಾಕ್ಷ್ಯ, ವೃತ್ತಾಂತ ಮೊದಲಾದವುಗಳ) ಕಡತ; ನಕಲು; ಲಿಖಾವಟ್ಟು; ರಿಕಾರ್ಡು; ದಾಖಲೆ.
  4. ದಾಖಲಿತ ಸ್ಥಿತಿ; ದಾಖಲೆಯಾಗಿರುವಿಕೆ.
  5. (ಸ್ಮಾರಕವಾಗಿ ಇಟ್ಟಿರುವ) ಯಾವುದೇ ದಾಖಲೆ.
  6. (ಚಿತ್ರ, ಪ್ರತಿಮೆ ಮೊದಲಾದ ರೂಪದ) ಸ್ಮಾರಕ.
  7. ರೆಕಾರ್ಡು:
    1. ಧ್ವನಿ ಸಂಗೀತ ಮೊದಲಾದವನ್ನು ಮುದ್ರಿಸಿಟ್ಟ ತಟ್ಟೆ: gramophone records ಗ್ರಾಮಹೋನಿನ ರೆಕಾರ್ಡುಗಳು, ತಟ್ಟೆಗಳು.
    2. ಗ್ರಾಮಹೋನ್‍ ರೆಕಾರ್ಡು, ಕಾಂತೀಯ ಟೇಪು ಮೊದಲಾದವುಗಳ ಮೇಲೆ ಮಾಡಿದ (ಧ್ವನಿ) ಮುದ್ರಣ.
  8. ವ್ಯಕ್ತಿಯ–ಪೂರ್ವವೃತ್ತಾಂತ, ಪೂರ್ವಚರಿತ್ರೆ, ಪೂರ್ವೇತಿಹಾಸ, ಲಿಖಾವಟ್ಟು: his record is against him ಅವನಿಗೆ ಸಂಬಂಧಿಸಿದ ಲಿಖಾವಟ್ಟೇ ಅವನಿಗೆ ವಿರೋಧವಾಗಿದೆ; ಅವನ ಪೂರ್ವವೃತ್ತಾಂತವೇ ಅವನಿಗೆ ವಿರೋಧವಾಗಿದೆ.
  9. ಒಬ್ಬ ವ್ಯಕ್ತಿಯ ಹಿಂದಿನ ಅಪರಾಧಗಳ ಪಟ್ಟಿ.
  10. ಅತ್ಯುತ್ತಮ ದಾಖಲೆ; ಮುಖ್ಯವಾಗಿ ಆಟದಲ್ಲಿ ಹಿಂದಿನ ದಾಖಲೆಗಳನ್ನೆಲ್ಲ ನಿರ್ಮಿಸಿದ ಅತ್ಯುತ್ತಮ ಸಾಧನೆ.
  11. (ಕಂಪ್ಯೂಟರ್‍) ಒಂದೇ ಘಟಕವಾಗಿ ಪರಿಶೀಲಿಸುವ, ಸಂಬಂಧಪಟ್ಟ ಮಾಹಿತಿಗಳು, ಬಾಬುಗಳು; ಮಾಹಿತಿ ದಾಖಲೆ, ಪಟ್ಟಿ.
ಪದಗುಚ್ಛ
  1. a matter of record ದಾಖಲಿತ ವಿಷಯ; ದಾಖಲೆಯಾಗಿರುವ ವಿಷಯ; ದಾಖಲೆ ಯಾಗಿರುವುದರಿಂದ ವಾಸ್ತವಾಂಶವೆಂದು ಸ್ಥಾಪಿತವಾಗಿರುವ ವಿಷಯ.
  2. break (or cut or beat) the record ಹಿಂದಿನ ದಾಖಲೆಗಳನ್ನೆಲ್ಲ–ಮುರಿ, ಮೀರಿಸು, ಮೀರಿಸಿ ಅತ್ಯುತ್ತಮ ಸಾಧನೆಯನ್ನು ಪಡೆ, ವಿಕ್ರಮವನ್ನು ಸಾಧಿಸು.
  3. court of record (ತನ್ನ ಮುಂದೆ ಜರುಗುವ ಕಾರ್ಯಕ್ರಮಗಳನ್ನೆಲ್ಲ ದಾಖಲೆಯಾಗಿ ಬರೆದಿಡುವ, ಹಾಗಿಟ್ಟ ದಾಖಲೆಗಳಿಗೆ ನ್ಯಾಯಸಮ್ಮತವಾದ ಸಾಕ್ಷ್ಯವೆಂಬ ಪ್ರಾಮಾಣ್ಯ ಇರುವ) ಲಿಕಾವಟ್ಟಿನ ಅದಾಲತ್ತು; ದಾಖಲೆ ನ್ಯಾಯಾಲಯ; ದಾಖಲೆಗಳ ಕೋರ್ಟು.
  4. for the record ದಾಖಲೆಯಾಗಿ; ಅಧಿಕೃತ ಹೇಳಿಕೆ ಮೊದಲಾದವುಗಳಾಗಿ.
  5. go on record ದಾಖಲೆ ಆಗು ಯಾ ಮಾಡು; ದಾಖಲೆಯಾಗುವಂತೆ ತನ್ನ ಅಭಿಪ್ರಾಯ ಯಾ ತೀರ್ಪನ್ನು ಬಹಿರಂಗವಾಗಿ ಯಾ ಅಧಿಕೃತವಾಗಿ ಹೇಳು.
  6. have a record ಅಪರಾಧಿಯೆಂದು , ತಪ್ಪಿತಸ್ಥನೆಂದು–ದಾಖಲೆಯಾಗಿರು, ಪ್ರಸಿದ್ಧನಾಗಿರು.
  7. keep to the record ದಾಖಲೆಗಳನ್ನು ಬಿಟ್ಟುಹೋಗದಿರು; ಅಪ್ರಸಕ್ತ ವಿಷಯಗಳನ್ನು ಪ್ರಸ್ತಾಪಿಸದಿರು.
  8. off the record ದಾಖಲೆಗೆ ಸೇರದೆ, ಬಾಹ್ಯವಾಗಿ; ಅನಧಿಕೃತವಾದ ಯಾ ಗೋಪ್ಯವಾದ ಹೇಳಿಕೆ ಮೊದಲಾದವುಗಳಾಗಿ.
  9. on record (ಅಧಿಕೃತವಾಗಿ) ದಾಖಲಾಗಿರುವ; ಸಾರ್ವಜನಿಕವಾಗಿ ತಿಳಿದಿರುವ.
  10. put (or get or set etc.) the record straight ತಪ್ಪು ತಿಳುವಳಿಕೆಯನ್ನು, ತಪ್ಪು ಅಭಿಪ್ರಾಯವನ್ನು ಸರಿಪಡಿಸು.
  11. travel out of the record ದಾಖಲೆಗಳನ್ನು ಬಿಟ್ಟು ದೂರ ಹೋಗು; ಅಪ್ರಸಕ್ತ ವಿಷಯಗಳನ್ನು ಪ್ರಸ್ತಾಪಿಸು.
See also 1record  2record
3record ರೆಕಾರ್ಡ್‍
ಗುಣವಾಚಕ

ಎಲ್ಲ ದಾಖಲೆಗಳನ್ನೂ ಮೀರಿಸುವ, ಮುರಿಯುವ: record speed ಎಲ್ಲ ದಾಖಲೆಗಳನ್ನೂ ಮುರಿಯುವ ವೇಗ.