recondite ರೆಕಂಡೈಟ್‍, ರಿಕಾಂಡೈಟ್‍
ಗುಣವಾಚಕ
  1. (ಜ್ಞಾನ, ಶಾಸ್ತ್ರ, ವಿಷಯ ಮೊದಲಾದವುಗಳ ವಿಷಯದಲ್ಲಿ)
    1. ಗಹನವಾದ; ದುಜ್ಞೇಯ; ತಿಳಿದುಕೊಳ್ಳಲು ಕಷ್ಟವಾದ: a recondite treatise ಗಹನವಾದ ಪ್ರಕರಣ ಗ್ರಂಥ.
    2. ಗೂಢ; ಸಾಮಾನ್ಯಮತಿಗೆ ಮೀರಿದ: recondite principles ಗೂಢತತ್ತ್ವಗಳು.
    3. ಹೆಚ್ಚು ಪರಿಚಿತವಲ್ಲದ; ಅಲ್ಪವಿದಿತ: out of the way and recondite details ಎಲ್ಲೋ ಅಭುಕ್ತಮೂಲೆಯ ಅಪರಿಚಿತ ವಿವರಗಳು.
  2. (ಕವಿಯ ಯಾ ಶೈಲಿಯ ವಿಷಯದಲ್ಲಿ)
    1. ಗಹನ; ಗಹನವಾದ ಸೂಕ್ಷ್ಮ ವಿಷಯಗಳನ್ನೂ ಪ್ರಸ್ತಾವಗಳನ್ನೂ ಒಳಗೊಂಡ.
    2. ಗೂಢ; ಕ್ಲಿಷ್ಟ; ಕಠಿಣ; ದುರ್ಬೋಧ; ದುರವಗಾಹ; ದುಜ್ಞೇಯ.