reconcile ರೆಕನ್ಸೈಲ್‍
ಸಕರ್ಮಕ ಕ್ರಿಯಾಪದ
  1. (ಮನಸ್ತಾಪ ತೊಲಗಿಸಿ) ಸ್ನೇಹವನ್ನು ಉಂಟುಮಾಡು, ಮಾಡಿಕೊ; ರಾಜಿ ಮಾಡಿಸು, ಮಾಡಿಕೊ.
  2. (ಅಪವಿತ್ರಗೊಳಿಸಿದ ಪವಿತ್ರ ಸ್ಥಳವನ್ನು ಸಂಸ್ಕಾರ ಕ್ರಿಯೆಗಳಿಂದ) ಪುನಃಪವಿತ್ರಗೊಳಿಸು; ಮತ್ತೆ ಶುದ್ಧೀಕರಿಸು.
  3. (ಪಾಲಿಗೆ ಬಂದದ್ದನ್ನು ಅನುಭವಿಸಲು, ಮನಸ್ಸಿಲ್ಲದ್ದನ್ನು ಮಾಡಲು) ಒಪ್ಪಿಸು ಯಾ ಒಪ್ಪಿಕೊ.
  4. (ಮನಸ್ತಾಪ, ವ್ಯಾಜ್ಯ ಮೊದಲಾದವನ್ನು) ಬಗೆಹರಿಸು; ಪರಿಹರಿಸು; ರಾಜಿ ಮಾಡು.
  5. (ಪರಸ್ಪರ ವಿರುದ್ಧವೆಂದು ತೋರುವ ಸಂಗತಿಗಳು, ಹೇಳಿಕೆಗಳು, ಗುಣಗಳು, ಕ್ರಿಯೆಗಳು ಮೊದಲಾದವನ್ನು)
    1. ಸಮನ್ವಯಗೊಳಿಸು; ಸಮಂಜಸಗೊಳಿಸು.
    2. (ವಾದದಿಂದ ಯಾ ಆಚರಣೆಯಿಂದ ಅವುಗಳ) ಸಮನ್ವಯ, ಸಾಮಂಜಸ್ಯವನ್ನು ತೋರಿಸು.