recommend ರೆಕಮಂಡ್‍
ಸಕರ್ಮಕ ಕ್ರಿಯಾಪದ
  1. (ತನ್ನನ್ನು, ತನ್ನ ಆತ್ಮವನ್ನು, ತನ್ನ ಕೂಸು, ಮೊದಲಾದವನ್ನು, ದೇವರ ವಶಕ್ಕೆ ಯಾವನೇ ವ್ಯಕ್ತಿಯ ವಶಕ್ಕೆ ಯಾ ದೈವರಕ್ಷಣೆ ಯಾ ರಕ್ಷಕನ ರಕ್ಷಣೆಗೆ) ಒಪ್ಪಿಸಿಕೊ ಯಾ ಒಪ್ಪಿಸು; ಸಮರ್ಪಿಸಿಕೊ ಯಾ ಸಮರ್ಪಿಸು.
  2. (ಹುದ್ದೆ, ಉಪಕಾರ, ಪರೀಕ್ಷಣಕ್ಕೆ ಅರ್ಹನೆಂದು) ಶಿಫಾರಸ್‍ ಮಾಡು; ವಾಕ್ಸಹಾಯ ಮಾಡು: can you recommend me a cook? ನನಗಾಗಿ ಒಬ್ಬ ಅಡುಗೆಯವನನ್ನು ಶಿಫಾರಸ್‍ ಮಾಡಬಲ್ಲಿರಾ? recommend a person to an officer for employment ಒಬ್ಬನನ್ನು ಒಬ್ಬ ಅಧಿಕಾರಿಗೆ ಉದ್ಯೋಗಕ್ಕಾಗಿ ಶಿಫಾರಸ್‍ ಮಾಡು.
  3. (ಗುಣಗಳು, ನಡೆವಳಿಕೆ ಮೊದಲಾದವುಗಳ ವಿಷಯದಲ್ಲಿ, ಆತ್ಮಾರ್ಥಕ) ಶಿಫಾರಸ್‍ ಆಗಿ ವರ್ತಿಸು; (ಒಬ್ಬನನ್ನು) ಅಂಗೀಕಾರಾರ್ಹನನ್ನಾಗಿ ಯಾ ಜನರು ಮೆಚ್ಚುವಂತೆ ಮಾಡು: his qualities recommend themselves to all ಅವನ ಗುಣಗಳು ಅವನನ್ನು ಎಲ್ಲರೂ ಮೆಚ್ಚುವಂತೆ ಮಾಡಿದುವು, ಅವನಿಗೆ ಎಲ್ಲರ ಮೆಚ್ಚುಗೆಯನ್ನೂ ಗಳಿಸಿಕೊಟ್ಟವು.
  4. (ಕಾರ್ಯ, ಕಾರ್ಯವಿಧಾನ, ಚಿಕಿತ್ಸೆ ಮೊದಲಾದವನ್ನು ಅನುಸರಿಸಬೇಕೆಂದು ಒಬ್ಬನಿಗೆ) ಸಲಹೆ ಕೊಡು; ಶಿಫಾರಸ್‍ ಮಾಡು: he recommended certain steps to forestall price rise ಬೆಲೆಗಳ ಏರಿಕೆಯನ್ನು ಪೂರ್ವಭಾವಿಯಾಗಿ ತಡೆಯಲು ಕೆಲವು ಕಾರ್ಯವಿಧಾನಗಳನ್ನು ಅವನು ಶಿಫಾರಸ್‍ ಮಾಡಿದ.