See also 2recoil
1recoil ರಿಕಾಇಲ್‍
ಅಕರ್ಮಕ ಕ್ರಿಯಾಪದ
  1. (ವಿರಳ ಪ್ರಯೋಗ) ಶತ್ರುಗಳೆದುರಿಗೆ ಹಿಮ್ಮೆಟ್ಟು: the troops recoiled before the formidable enemy ಅ ಪಡೆಗಳು ದುರ್ಜೇಯನಾದ ಶತ್ರುವಿನೆದುರು ಹಿಮ್ಮೆಟ್ಟಿದುವು.
  2. (ಭಯ, ಬೀಭತ್ಸತೆ, ಹೇವರಿಕೆ, ಮೊದಲಾದವುಗಳಿಂದ) ಮನಸ್ಸುಹಿಮ್ಮೆಟ್ಟು, ಸೆಡೆ, ಹಿಂದೆಗೆ.
  3. (ಡಿಕ್ಕಿ ಹೊಡೆದು, ಸಂಘಟಿಸಿ) ಹಿನ್ನೆಗೆ; (ಹಿಂದಕ್ಕೆ) ಪುಟವೇಳು.
  4. (ಬಂದೂಕಗಳ ವಿಷಯದಲ್ಲಿ) ಹಿಂದೊದೆ; ಹಿನ್ನೆಗೆ; ಹಿಂದಕ್ಕೆ ಚಿಮ್ಮು, ಎಗರು.
  5. (ಭೌತವಿಜ್ಞಾನ) ಹಿನ್ನೆಗೆ; (ಮುಖ್ಯವಾಗಿ ಪರಮಾಣುವಿನ ವಿಷಯದಲ್ಲಿ) ಕಣವೊಂದನ್ನು ಹೊರ ಸೂಸಿದುದರ ಪರಿಣಾಮವಾಗಿ ಸಂವೇಗ ಸಂರಕ್ಷಣದ ಕಾರಣ ಹಿಂದಕ್ಕೆ ಚಿಮ್ಮು.
See also 1recoil
2recoil ರಿಕಾಇಲ್‍
ನಾಮವಾಚಕ
  1. ಹಿನ್ನೆಗೆತ; ಹಿನ್‍ಸರಿತ.
  2. (ಮುಖ್ಯವಾಗಿ ಮನಸ್ಸಿನ ವಿಷಯದಲ್ಲಿ) (ಭಯ, ಬೀಭತ್ಸತೆ, ಮೊದಲಾದ ಕಾರಣಗಳಿಂದ) ಹಿಮ್ಮೆಟ್ಟುವಿಕೆ; ಹಿಂದೆಗೆಯುವಿಕೆ.
  3. (ಬಂದೂಕುಗಳ ವಿಷಯದಲ್ಲಿ) ಹಿಂದೊದೆತ ಯಾ ಅದರ ಅನುಭವ.