recognition ರೆಕಗ್ನಿಷನ್‍
ನಾಮವಾಚಕ
  1. (ಯಾವುದೇ ವಿಷಯದ ಸಾಧುತ್ವ, ನೈಜತೆ, ಸ್ವರೂಪ, ಅಸ್ತಿತ್ವ ಮೊದಲಾದವನ್ನು ಯಾ ವ್ಯಕ್ತಿಯು ಹೇಳಿಕೊಳ್ಳುವುದನ್ನು) ಒಪ್ಪುವುದು; ಒಪ್ಪಿಕೆ; ಅಂಗೀಕಾರ.
  2. (ವ್ಯಕ್ತಿಗೆ ಯಾ ವಿಷಯಕ್ಕೆ ಕೊಡುವ) ಗಣನೆ; ಬೆಲೆ.
  3. (ವ್ಯಕ್ತಿಯ ಯಾ ವಿಷಯದ ಸ್ವರೂಪವನ್ನು) ಕಂಡುಕೊಳ್ಳುವಿಕೆ; ಅರಿತು ಕೊಳ್ಳುವಿಕೆ; ಮನಗಾಣುವಿಕೆ.
  4. (ವ್ಯಕ್ತಿಯು ಇಂಥವನು ಯಾ ವಿಷಯ ಇಂಥದ್ದು ಎಂಬ) ಮಾನ್ಯತೆ; ಪರಿಗಣನೆ; ಮನ್ನಣೆ; ಅರಿವು.
  5. (ಪರಿಚಿತ ವ್ಯಕ್ತಿ ಯಾ ವಸ್ತು ಎಂದು) ಗುರುತು ಹಿಡಿಯುವಿಕೆ; ಗುರುತಿಸುವಿಕೆ; ಅಭಿಜ್ಞಾನ.