See also 2recess
1recess ರಿ()ಸೆಸ್‍
ನಾಮವಾಚಕ
    1. ಬಿಡುವು; ವಿರಾಮ; ಕೆಲಸದಿಂದ (ಸ್ವಲ್ಪಕಾಲದ) ವಿಶ್ರಾಂತಿ.
    2. (ಮುಖ್ಯವಾಗಿ ಪಾರ್ಲಿಮೆಂಟು ಮೊದಲಾದವುಗಳ, ಅಮೆರಿಕನ್‍ ಪ್ರಯೋಗ ಶಾಲೆಯ ದಿನದ ಯಾ ನ್ಯಾಯಸ್ಥಾನದ) ತಾತ್ಕಾಲಿಕ – ವಿರಾಮಕಾಲ, ಬಿಡುವು.
  1. (ನೀರು, ನೆಲ, ನೀರ್ಗಲ್ಲು, ಪ್ರವಾಹ ಮೊದಲಾದವುಗಳ ವಿಷಯದಲ್ಲಿ)
    1. ಮುಂಚಿನ ಎಲ್ಲೆಯಿಂದ ಹಿಂದಕ್ಕೆ ಸರಿಯುವುದು; ಹಿನ್‍ಸರಿತ.
    2. ಹಿನ್‍ಸರಿತದ ಪ್ರಮಾಣ.
  2. (ವಿರಳ ಪ್ರಯೋಗ) (ಯಾವುದೇ ಸ್ಥಾನದಿಂದ) ಹಿನ್‍ಸರಿಯುವುದು; ಹಿಮ್ಮರಳುವುದು; ಹಿಮ್ಮೆಟ್ಟುವುದು.
  3. (ಅನೇಕ ವೇಳೆ ಬಹುವಚನದಲ್ಲಿ) ಏಕಾಂತಸ್ಥಾನ ಯಾ ವಿವಿಕ್ತಸ್ಥಾನ: in the recesses of the Alps ಆಲ್ಟ್ಸ್‍ ಪರ್ವತಶ್ರೇಣಿಯ ವಿವಿಕ್ತ ಸ್ಥಾನಗಳಲ್ಲಿ. in the recesses of the heart ಹೃದಯದ ಏಕಾಂತ(ಸ್ಥಾನ)ದಲ್ಲಿ, ಅಂತರಾಳದಲ್ಲಿ; ಹೃದಯಗಹ್ವರದಲ್ಲಿ.
  4. (ಭೂವಿಜ್ಞಾನ) (ಪರ್ವತಶ್ರೇಣಿಯ ಮಡಿಕೆಯಿಂದಾಗುವ) ಗೂಡು.
  5. (ಗೋಡೆಯಲ್ಲಿನ) ಗೂಡು.
  6. (ಅಂಗರಚನಾಶಾಸ್ತ್ರ) (ಯಾವುದೇ ಅಂಗದ ಹೊರಭಾಗದಲ್ಲಿನ) ಮಡಿಕೆ ಯಾ ಕುಳಿ.
See also 1recess
2recess ರಿ()ಸೆಸ್‍
ಸಕರ್ಮಕ ಕ್ರಿಯಾಪದ
  1. ಗೂಡಿನಲ್ಲಿಡು.
  2. ಹಿಂದೆ ಇಡು; ಹಿಂದುಗಡೆಗೆ ಇಡು.
  3. ಗೂಡನ್ನು ಯಾ ಗೂಡುಗಳನ್ನು – ಮಾಡಿಕೊಡು, ಮಾಡು.
  4. (ನ್ಯಾಯಸ್ಥಾನ ಮೊದಲಾದವುಗಳನ್ನು) ತಾತ್ಕಾಲಿಕವಾಗಿ ನಿಲ್ಲಿಸುವಂತೆ, ಬಿಡುವು ಕೊಡುವಂತೆ ಆದೇಶಿಸು, ಆಜ್ಞೆಮಾಡು.
ಅಕರ್ಮಕ ಕ್ರಿಯಾಪದ
  1. (ಕೆಲಸದಿಂದ) ಬಿಡುವು ತೆಗೆದುಕೊ; ವಿರಾಮ ತೆಗೆದುಕೊ.
  2. ಕಾರ್ಯಕಲಾಪವನ್ನು ಮುಂದೂಡು.