reception ರಿಸೆಪ್ಷನ್‍
ನಾಮವಾಚಕ
  1. ಎಡೆಮಾಡಿ ಕೊಡುವುದು; ಸ್ಥಳ, ಸ್ಥಳಾವಕಾಶ ಕೊಡುವುದು; ಇರಗೊಡುವುದು; ಇರಿಸುವುದು; ತಂಗಲು, ವಾಸಿಸಲು ಬಿಡದಿ ಯಾ ವಸತಿ ಮಾಡಿಕೊಡುವುದು: the rooms were prepared for his reception ಕೊಠಡಿಗಳನ್ನು ಅವನ ಬಿಡದಿಗಾಗಿ ಸಿದ್ಧಪಡಿಸಿದರು.
  2. (ವ್ಯಕ್ತಿಯನ್ನು ಗೋಷ್ಠಿ, ಸಂಘ, ಸಂಸ್ಥೆ ಮೊದಲಾದವಕ್ಕೆ) ಸೇರಿಸಿಕೊಳ್ಳುವುದು; ಪ್ರವೇಶಮಾಡಿಸಿಕೊಳ್ಳುವುದು; ದಾಖಲುಮಾಡುವುದು: he was honoured by reception into the Academy ಅಕ್ಯಾಡೆಮಿಗೆ ಆತನನ್ನು ಸೇರಿಸಿಕೊಳ್ಳುವ ಮೂಲಕ ಗೌರವಿಸಲಾಯಿತು.
  3. (ಔಪಚಾರಿಕವಾದ, ಮರ್ಯಾದೆ ಗೌರವ ಗಳಿಂದಕೂಡಿದ) ಸ್ವಾಗತ: the reception of the delegates ನಿಯೋಗಿಗಳ ಸ್ವಾಗತ.
  4. ಸ್ವಾಗತ ಸಮಾರಂಭ, ಕೂಟ: after the show there will be a reception ಪ್ರದರ್ಶನಾನಂತರ ಸ್ವಾಗತ ಸಮಾರಂಭವಿದೆ.
  5. (ಅತಿಥಿಗಳು, ಗಿರಾಕಿಗಳು ಮೊದಲಾದವರು ಹೋಟೆಲು, ಕಚೇರಿ ಮೊದಲಾದ ಕಡೆ ಬಂದೊಡನೆ) ಹಾಜಾರಾಗುವ ಸ್ಥಳ.
  6. (ಭಾವನೆಗಳು ಮೊದಲಾದವುಗಳನ್ನು ಮನಸ್ಸಿನಲ್ಲಿ ತಳೆಯುವ) ಗ್ರಹಣ; ಗ್ರಹಿಕೆ: he has a great faculty of reception, but little originality ಅವನಿಗೆ ಅಪಾರವಾದ ಗ್ರಹಿಕೆ, ಗ್ರಹಣಶಕ್ತಿ ಇದೆ, ಆದರೆ ಅವನಲ್ಲಿರುವ ಸ್ವಂತಿಕೆ ಅತ್ಯಲ್ಪ.
  7. (ವಿರಳ ಪ್ರಯೋಗ) ಅಂಗೀಕಾರ; ಒಪ್ಪಿಗೆ; ಅನುಮೋದನೆ; ನಿಜವೆಂಬ ಸಮ್ಮತಿ: the general reception of the Newtonian hypothesis ನ್ಯೂಟನ್ನನ ಊಹನಕ್ಕೆ ದೊರೆತಿರುವ ಸಾರ್ವಜನಿಕ ಅಂಗೀಕಾರ, ಅನುಮೋದನೆ.
  8. (ಹೀಗೆಂದು ನಿರ್ದೇಶಿಸಿದ ರೀತಿಯಲ್ಲಿ ದೊರೆತ) ಸ್ವಾಗತ; ಒಂದು ವಸ್ತು ಯಾ ವ್ಯಕ್ತಿಯನ್ನು ಸ್ವಾಗತಿಸಿದ ರೀತಿ, ವೈಖರಿ: his reception was frigid ಆತನಿಗೆ ದೊರೆತದ್ದು ಶುಷ್ಕ ಸ್ವಾಗತ, ನಿರಾದರದ ಸ್ವಾಗತ. the proposal had a favourable reception ಆ ಸೂಚನೆಗೆ ಅನುಕೂಲವಾದ ಸ್ವಾಗತ ದೊರೆಯಿತು.
  9. ಗ್ರಹಣ; ಪ್ರಸಾರಿತ ಸಂಕೇತಗಳನ್ನು ಗ್ರಹಿಸುವುದು ಯಾ ಅದರ ಗುಣಮಟ್ಟ.
ಪದಗುಚ್ಛ

warm reception

  1. ಬಿಸಿಸ್ವಾಗತ; ದ್ವೇಷದ ಸ್ವಾಗತ; ಪ್ರತಿಕೂಲ ಸ್ವಾಗತ.
  2. ಬೆಚ್ಚನೆಯ ಸ್ವಾಗತ; ಆದರದ ಉತ್ಸಾಹಪೂರ್ವಕವಾದ ಸ್ವಾಗತ.