receiver ರಿಸೀವರ್‍
ನಾಮವಾಚಕ
    1. ಪಡೆಯುವವನು.
    2. ಅಂಗೀಕರಿಸುವವನು; ಸ್ವೀಕರ್ತ; ತೆಗೆದುಕೊಳ್ಳುವವನು: receiver of bribes ಲಂಚ ತೆಗೆದುಕೊಳ್ಳುವವನು; ಲಂಚಕೋರ.
  1. ಆಸ್ತಿ ನಿರ್ವಾಹಕ; ದಿವಾಳಿಯ ಯಾ ವ್ಯಾಜ್ಯಕ್ಕೊಳಪಟ್ಟಿರುವ ಆಸ್ತಿಯನ್ನು ನಿರ್ವಹಿಸಲು ನ್ಯಾಯಸ್ಥಾನದ ಆಜ್ಞೆಯಿಂದ ನೇಮಕವಾದವನು.
  2. (ಕಳ್ಳನಿಗೆ ಶಾಮೀಲಾಗಿ) ಕಳವು ಮಾಲನ್ನು ಸ್ವೀಕರಿಸುವವನು, ತೆಗೆದುಕೊಳ್ಳುವವನು.
  3. (ರೇಡಿಯೋ ಯಾ ಟೆಲಿವಿಷನ್ನಿನ) ರಿಸೀವರು; ಸಿಗ್ನಲುಗಳನ್ನು ಪಡೆಯುವ ಸಾಧನ.
  4. (ರಸಾಯನವಿಜ್ಞಾನ) ಆಸವನದಲ್ಲಿ ಆಸವಿತ ದ್ರವವನ್ನು ಸಂಗ್ರಹಿಸುವ ಪಾತ್ರೆ.
  5. (ಮುಖ್ಯವಾಗಿ ಟೆಲಿಹೋನಿನ) ರಿಸೀವರು; ಗ್ರಾಹಕ (ಭಾಗ); ಕಿವಿಗೆ ಕೇಳಲು ಇಟ್ಟುಕೊಳ್ಳುವ ಭಾಗ.