receive ರಿಸೀವ್‍
ಸಕರ್ಮಕ ಕ್ರಿಯಾಪದ
  1. (ಕೊಟ್ಟದ್ದನ್ನು ಯಾ ತಂದೊಪ್ಪಿಸಿದ್ದನ್ನು) ತೆಗೆದುಕೊ; ಒಪ್ಪಿಸಿಕೊ; ಸ್ವೀಕರಿಸು; ಅಂಗೀಕರಿಸು: receive an invitation ಕರೆಯನ್ನು, ಆಹ್ವಾನವನ್ನು ಸ್ವೀಕರಿಸು. receive a petition ಅರ್ಜಿಯನ್ನು ತೆಗೆದುಕೊ, ಅಂಗೀಕರಿಸು.
  2. (ಊರೆಯಾಗಿದ್ದು ಭಾರ ಮೊದಲಾದವನ್ನು) ಹೊತ್ತುಕೊ; ತೆಗೆದುಕೊ; ಆನಿಕೊ; ಆತುಕೊ: the arch receives the weight of the roof ಆ ಕಮಾನು ಛಾವಣಿಯ ಭಾರವನ್ನು ಹೊತ್ತುಕೊಂಡಿದೆ. they received his body in their hands ಅವನ ದೇಹವನ್ನು ಅವರು ಕೈಯಲ್ಲಿ ಆತುಕೊಂಡರು.
  3. (ರೂಪಕವಾಗಿ) (ಪೆಟ್ಟು, ನೋವು, ಮನಸ್ಸಿಗುಂಟಾದ ಆಘಾತ, ಮೊದಲಾದವನ್ನು) ತಾಳಿಕೊ; ತಡೆದುಕೊ; ಸಹಿಸಿಕೊ: he received the shock with equanimity ಆ ಆಘಾತವನ್ನು ಅವನು ಸಮಚಿತ್ತದಿಂದ ತಾಳಿಕೊಂಡ.
  4. (ಸಂಘ, ಸಂಸ್ಥೆ ಮೊದಲಾದವಕ್ಕೆ) ಸೇರಿಸು; ಪ್ರವೇಶ ಕೊಡು: they received him into the church ಅವನನ್ನು ಅವರು ಚರ್ಚಿಗೆ, ಪಾದ್ರಿಯ ವೃತ್ತಿಗೆ, ಸೇರಿಸಿಕೊಂಡರು.
  5. ಒಳಕ್ಕೆ ಬರಗೊಡು; ಒಳಗೆ ಎಡೆಗೊಡು, ಅವಕಾಶ ಕೊಡು, ಆಸ್ಪದಕೊಡು: I had to receive his visits ಅವನ ಭೇಟಿಗಳಿಗೆ ನಾನು ಎಡೆಗೊಡಬೇಕಾಯಿತು.
  6. ಸ್ವೀಕಾರಕ್ಕೆ – ಈಡಾಗು, ಪಾತ್ರವಾಗು, ಭಾಜನವಾಗು: the basin received Chirst’s blood ಆ ಬೋಗುಣಿಯು ಕ್ರಿಸ್ತನ ರಕ್ತಕ್ಕೆ ಭಾಜನವಾಯಿತು. he was fitted to receive the knowledge of God ದೇವರನ್ನು ಕುರಿತ ಜ್ಞಾನಕ್ಕೆ ಅವನು ಪಾತ್ರವಾಗಿದ್ದ.
  7. ಹಿಡಿ; ಹಿಡಿಸು; ಹೋಗಲು ಅವಕಾಶ ಹೊಂದಿರು: the hole was large enough to receive two men ಆ ಗೂಡು ಇಬ್ಬರು ಹಿಡಿಸುವಷ್ಟು ದೊಡ್ಡದಾಗಿತ್ತು.
  8. (ಗುರುತು, ಮುದ್ರೆ, ಭಾವನೆ, ಮೊದಲಾದವನ್ನು) ತಳೆ; ಪಡೆ; ಹೊರು; ಹೊಂದಿರು; ತಳೆದುಕೊ: receive a stamp ಮುದ್ರೆಯನ್ನು ಹೊಂದು, ಪಡೆ. receive an impression ಭಾವನೆಯನ್ನು ತಳೆದುಕೊ.
  9. ಹೊರು; ಹೊತ್ತುಕೊ; ವಹಿಸು: he who has received our yoke ನಾವು ಹೊರಿಸಿದ ನೊಗವನ್ನು, ಹೊಣೆಯನ್ನು ಹೊತ್ತುಕೊಂಡವನು.
  10. (ಸೋಲನ್ನು) ಒಪ್ಪಿಕೊ: the town received the French contingent ಆ ಪಟ್ಟಣವು ಹ್ರೆಂಚ್‍ ಪಡೆಗೆ ಸೋಲನ್ನೊಪ್ಪಿತು.
  11. ಬರಮಾಡಿಕೊ; ಬರಗೊಡು: he shall not be received at my house ಅವನನ್ನು ನನ್ನ ಮನೆಗೆ ಬರಗೊಡುವುದಿಲ್ಲ.
  12. ಅತಿಥಿಯಾಗಿ ಯಾ ಅಭ್ಯಾಗತನನ್ನಾಗಿ ಸತ್ಕರಿಸು, ಆದರಿಸು: he that receiveth me receiveth Him that sent me ನನ್ನನ್ನು ಅಭ್ಯಾಗತನನ್ನಾಗಿ ಯಾವನು ಆದರಿಸುತ್ತಾನೋ ಅವನು ನನ್ನನ್ನು ಕಳುಹಿಸಿದವನನ್ನೇ (ಭಗವಂತನನ್ನೇ) ಆದರಿಸಿದಂತೆ.
  13. -ರೀತಿಯಲ್ಲಿ ಸ್ವಾಗತಿಸು; ಪುರಸ್ಕರಿಸು ಯಾ ತಿರಸ್ಕರಿಸು: he was received with cries of ‘Traitor’ ಅವನನ್ನು ‘ದ್ರೋಹಿ’ ಎಂದು ಕೂಗಿ ಸ್ವಾಗತಿಸಿದರು. stay here and receive him ಇಲ್ಲಿಯೇ ಇದ್ದು ಅವನನ್ನು ಸ್ವಾಗತಿಸು.
  14. ನಿಜವೆಂದು ನಂಬು; ಒಪ್ಪು, ಅಂಗೀಕರಿಸು: an axiom universally received ಸರ್ವಸಾಮಾನ್ಯವಾಗಿ ಅಂಗೀಕೃತವಾದ ಸ್ವತಸ್ಸಿದ್ಧ ಸೂತ್ರ. they have not received our report ನಮ್ಮ ವರದಿಯನ್ನು ಅವರು ನಿಜವೆಂದು ಒಪ್ಪಿಲ್ಲ.
  15. ಪಡೆ: receive a letter (ಯೋಗಕ್ಷೇಮದ ಯಾ ಇತರ) ಕಾಗದವನ್ನು ಪಡೆ.
  16. ಪಡೆ; (ಸಲ್ಲಬೇಕಾದದ್ದು) ದೊರೆ: I have not yet received my dividend ನನಗೆ ಸಲ್ಲಬೇಕಾದ ಲಾಭಾಂಶ ನನಗಿನ್ನೂ ದೊರೆತಿಲ್ಲ. it deserves more attention than it receives ಅದಕ್ಕೆ ದೊರೆತಿರುವ ಗಮನಕ್ಕಿಂತ ಹೆಚ್ಚು ಗಮನ ಅದಕ್ಕೆ ಸಲ್ಲುತ್ತದೆ.
  17. (ಅಪಮಾನ, ಗೌರವ, ದಂಡನೆ ಮೊದಲಾದವನ್ನು) ಹೊಂದು; ಪಡೆ; ಅನುಭವಿಸು: receive insults ಅಪಮಾನಗಳನ್ನು ಅನುಭವಿಸು. receive honour ಗೌರವ ಹೊಂದು. receive punishment ಶಿಕ್ಷೆಯನ್ನು, ದಂಡನೆಯನ್ನು ಪಡೆ.
  18. ಪಾಲು, ಭಾಗ – ಪಡೆ: received his portion ತನ್ನ ಪಾಲನ್ನು ಪಡೆದ.
  19. (ಪ್ರಸಾರ ಮಾಡಿದ ಸಂಕೇತಗಳನ್ನು) ಧ್ವನಿಗಳಾಗಿ ಯಾ ಚಿತ್ರಗಳಾಗಿ ಪರಿವರ್ತಿಸು.
  20. (ಟೆನಿಸ್‍)ಸರ್ವ್‍ ಮಾಡುವವನ ಚೆಂಡನ್ನು ಪಡೆಯುವ ಆಟಗಾರನಾಗು.
  21. (ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ) (ತಿಳಿದೂ) ಕಳ್ಳಮಾಲನ್ನು ಸ್ವೀಕರಿಸು, ತೆಗೆದುಕೊ.
ಪದಗುಚ್ಛ
  1. attend without receiving (ಪ್ರಭುಭೋಜನ ಸಂಸ್ಕಾರದಲ್ಲಿ ಪ್ರಸಾದ) ಸ್ವೀಕರಿಸದೆ ಸುಮ್ಮನೆ ಹಾಜರಾಗಿರು.
  2. be at (or on) the receiving end(ಆಡುಮಾತು) ಅಹಿತವಾದ ಅನುಭವಕ್ಕೆ ಈಡಾಗು, ಒಳಾಗಾಗು: be at the receiving end of satire ವಿಡಂಬನಕ್ಕೆ ಒಳಗಾಗಿರು.
  3. Lord, receive my soul! (ಸಾಯುತ್ತಿರುವವನ ಪ್ರಾರ್ಥನೆ) ದೇವರೇ, ನನ್ನ ಆತ್ಮವನ್ನು ಅಂಗೀಕರಿಸು.
  4. receive as a prophecy ಭವಿಷ್ಯವಾಣಿಯೆಂದೇ ಭಾವಿಸು.
  5. receive as certain ಖಂಡಿತವೆಂದು ನಂಬು; ನಿಜವೆಂದು ಭಾವಿಸು.
  6. receive company (ಅತಿಥಿಗಳಿಗೆ)ಸತ್ಕಾರ ಸಮಾರಂಭ ಏರ್ಪಡಿಸು.
  7. receive the sacraments (ಪ್ರಭುಭೋಜನ ಸಂಸ್ಕಾರದ ಬ್ರೆಡ್ಡು, ವೈನನ್ನು, ಎಂದರೆ) ಪವಿತ್ರ ಪ್ರಸಾದವನ್ನು ಸೇವಿಸು, ಸ್ವೀಕರಿಸು.
  8. receive the sinner’s confession (ಪಾತಕಿಯು ಮಾಡುವ) ಪಾಪಗಳ ಒಪ್ಪಿಗೆಯನ್ನು ಕೇಳು; ಕೇಳಿ ಮನ್ನಿಸು.