recede ರಿಸೀಡ್‍
ಅಕರ್ಮಕ ಕ್ರಿಯಾಪದ
  1. ಹಿಂದಕ್ಕೆ – ಹೋಗು, ಸರಿ; ಹಿಮ್ಮೆಟ್ಟು; ಹಿಂಜರಿ.
  2. (ನೋಟಕನು ಚಲಿಸುತ್ತಾ ಹೋದಂತೆ ಅವನ ನೋಟಕ್ಕೆ) ದೂರದೂರವಾಗು; ಹಿಂದಾಗು; ಹಿಂದುಳಿದುಬಿಡು; ಹೆಚ್ಚುಹೆಚ್ಚುದೂರವಾಗು.
  3. ಹಿಂದಕ್ಕೆ ಇಳಿಜಾರಾಗು, ಓಲು: his chin recedes backwards ಅವನ ಗಲ್ಲವು ಹಿಂದಕ್ಕೆ ಓಲಿದೆ.
  4. (ಒಪ್ಪಿಕೊಂಡಿರುವ ಗೊತ್ತುಪಾಡು, ಅಭಿಪ್ರಾಯ ಮೊದಲಾದವುಗಳಿಂದ) ಹಿಮ್ಮೆಟ್ಟು; ಹಿನ್‍ಸರಿ; ಹಿಂದೆಗೆ.
  5. (ಹೆಸರು, ಯೋಗ್ಯತೆ) ಕುಗ್ಗು; ಕಡಮೆಯಾಗು; ತಗ್ಗು; ಕುಂದು.
  6. (ಬೆಲೆ, ಮೌಲ್ಯ) ಇಳಿ; ತಗ್ಗು; ಕುಗ್ಗು; ಕುಸಿ: the prices have receded ಬೆಲೆಗಳು ತಗ್ಗಿವೆ.
  7. (ಗಂಡಸಿನ ಕೂದಲಿನ ವಿಷಯದಲ್ಲಿ)ಹಿನ್‍ಸರಿ; ಮುಂಭಾಗ, ಪಕ್ಕಗಳು ಮೊದಲಾದ ಕಡೆ ಬೆಳೆಯದೆ ನಿಂತುಹೋಗು, ಬೆಳೆಯದಿರು.