recapitulation ರೀಕಪಿಟ್ಯುಲೇಷನ್‍
ನಾಮವಾಚಕ
  1. (ಹೇಳಿದ ವಿಷಯದ ಮುಖ್ಯಾಂಶಗಳ) ಪುನಃ ಕಥನ; ಸಂಗ್ರಹ.
  2. ಹೇಳಿದ ವಿಷಯದ – ಮರುಸಮೀಕ್ಷೆ, ಪುನರವಲೋಕನ.
  3. (ಜೀವವಿಜ್ಞಾನ) ಪುನರ್ನಿರೂಪಣೆ; ಭ್ರೂಣದ ಬೆಳವಣಿಗೆಯಲ್ಲಿ ಆಗುವ ರೂಪ ಬದಲಾವಣೆಗಳು ಆ ಜೀವಿಯ ವಿಕಸನದ ಹಂತಗಳನ್ನು ನೆನಪಿಗೆ ತರುವಂತಿರುವುದು.
  4. (ಸಂಗೀತ) ಪುನರಾವರ್ತನ; (ಮುಖ್ಯವಾಗಿ ಸೊನಾಟ ಪ್ರಕಾರದಲ್ಲಿ) ಕೃತಿಯ ಪ್ರತಿಪಾದನಾ ಭಾಗದ ಪ್ರಧಾನ ಸ್ವರಸಂಗತಿಯ ಖಂಡವನ್ನು ಮತ್ತೆ ನುಡಿಸುವ ಭಾಗ.