rebut ರಿಬಟ್‍
ಸಕರ್ಮಕ ಕ್ರಿಯಾಪದ
(ಭೂತರೂಪಮತ್ತು ಭೂತಕೃದಂತ rebutted; ವರ್ತಮಾನ ಕೃದಂತ rebutting).
  1. ಹಿಂದಕ್ಕೆ ಅಟ್ಟು; ಹಿಮ್ಮೆಟ್ಟಿಸು: the mare did not rebut the horse ಆ ಹೆಂಗುದುರೆ ಗಂಡುಕುದುರೆಯನ್ನು ಹಿಮ್ಮೆಟ್ಟಿಸಲಿಲ್ಲ.
  2. ತಡೆಗಟ್ಟು; ಅಡ್ಡಿ ಒಡ್ಡು: rebut one’s ambition (ಒಬ್ಬನ) ಮಹತ್ವಾಕಾಂಕ್ಷೆಯನ್ನು ತಡೆಗಟ್ಟು.
  3. (ಸಾಕ್ಷ್ಯ, ಆಪಾದನೆ, ವಾದ ಮೊದಲಾದವನ್ನು ಪ್ರತಿಪ್ರಮಾಣಗಳಿಂದ) ತಪ್ಪೆಂದು, ಸುಳ್ಳೆಂದು, ಅಸಂಬದ್ಧವೆಂದು – ತೋರಿಸಿಕೊಡು, ರುಜುವಾತುಪಡಿಸು; ನಿರಾಕರಿಸು; ಖಂಡಿಸು; ಅಪ್ರಮಾಣೀಕರಿಸು: rebut one’s charge with evidence ಒಬ್ಬನು ಮಾಡಿದ ಆಪಾದನೆಯನ್ನು ಸಾಕ್ಷ್ಯಸಮೇತ ನಿರಾಕರಿಸು.