rebuild ರೀಬಿಲ್ಡ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ rebuilt)
  1. (ಮನೆ ಮೊದಲಾದವನ್ನು) ಮತ್ತೆ ಕಟ್ಟು; ಪುನಃ ನಿರ್ಮಿಸು.
  2. (ಯಂತ್ರ ಮೊದಲಾದವನ್ನು ಬಿಚ್ಚಿ, ಹೊಸ ಭಾಗಗಳನ್ನು ಹಾಕಿ) ಪುನಃ ಜೋಡಿಸು, ನಿರ್ಮಿಸು: rebuild a car ಕಾರನ್ನು ಪುನಃ ಜೋಡಿಸು.
  3. (ಭಗ್ನವಾದ ಸೇನೆ, ಸಂಸ್ಥೆ, ಮೊದಲಾದವನ್ನು) ಪುನಃ ಸಂಘಟಿಸು; ಪುನರ್ನಿರ್ಮಾಣ ಮಾಡು.
  4. (ಕೆಟ್ಟುಹೋದದ್ದನ್ನು, ಅವ್ಯವಸ್ಥಿತವಾಗಿರುವುದನ್ನು) ಪುನರ್ವ್ಯವಸ್ಥೆಗೊಳಿಸು: rebuild a shattered career ಶತಚ್ಛಿದ್ರವಾಗಿ ಹೋಗಿದ್ದ ವೃತ್ತಿಜೀವನವನ್ನು ಪುನರ್ವ್ಯವಸ್ಥೆಗೊಳಿಸು.