See also 2rebuff
1rebuff ರಿಬಹ್‍
ನಾಮವಾಚಕ
  1. (ಸ್ನೇಹ ಮಾಡಿಕೊಳ್ಳಲು ಬಯಸುವವನು, ನೆರವನ್ನು ನೀಡುವವನು, ಕೋರಿಕೆಯನ್ನು ಸಲ್ಲಿಸುವವನು, ಸಹಾನುಭೂತಿ ತೋರಿಸುವವನು, ಕುತೂಹಲ ಆಸಕ್ತಿಗಳನ್ನು ತೋರಿಸುವವನು ಮೊದಲಾದವರಿಗೆ ಮಾಡಿದ) ಮುಖಭಂಗ; ಮುಖ ಕೆತ್ತುವುದು; ನಿರಾಕರಣೆ; ಧಿಕ್ಕಾರ; ಛೀಮಾರಿ.
  2. (ಯಾವುದೇ ಕೆಲಸಕ್ಕೆ ಯಾ ಮುನ್ನಡೆಗೆ) ತಡೆ; ಪ್ರತಿರೋಧ.
See also 1rebuff
2rebuff ರಿಬಹ್‍
ಸಕರ್ಮಕ ಕ್ರಿಯಾಪದ
  1. (ಸ್ನೇಹಹಸ್ತ ನೀಡಿದವನು, ನೆರವನ್ನು ನೀಡಬಂದವನು, ಕೋರಿಕೆ ಸಲ್ಲಿಸಿದವನು, ಸಹಾನುಭೂತಿ ತೋರಿಸುವವನು, ಕುತೂಹಲ ಆಸಕ್ತಿಗಳನ್ನು ತೋರಿಸುವವನು, ಮೊದಲಾದವರ) ಮುಖಭಂಗ ಮಾಡು; ಮುಖ ಕೆತ್ತು; ನಿರಾದರ ತೋರಿಸು; ಧಿಕ್ಕರಿಸು; ಛೀಮಾರಿ ಮಾಡು.
  2. (ಯಾವುದೇ ಕೆಲಸ ಮೊದಲಾದವನ್ನು) ತಡೆ; ಅಡ್ಡಿಪಡಿಸು.