See also 2rebel  3rebel
1rebel ರೆಬಲ್‍
ನಾಮವಾಚಕ
  1. ಸ್ಥಾಪಿತ ಸರ್ಕಾರವನ್ನು ಆಯುಧಪಾಣಿಯಾಗಿ ಎದುರಿಸುವವನು; ಸ್ಥಾಪಿತ ಸರ್ಕಾರಕ್ಕೆ ನಿಷ್ಠೆಯಿಂದ ಇರಲೊಲ್ಲದವನು; ದಂಗೆಕೋರ; ಬಂಡಾಯಗಾರ.
  2. (ಯಾವುದೇ ಬಗೆಯ ಅಧಿಕಾರ, ನಿರ್ಬಂಧ, ಸಂಪ್ರದಾಯ, ಮೊದಲಾದವನ್ನು) ಪ್ರತಿಭಟಿಸುವವನು; ಪ್ರತಿಭಟನಕಾರ; ವಿರೋಧಿ.
See also 1rebel  3rebel
2rebel ರೆಬಲ್‍
ಗುಣವಾಚಕ
  1. ದಂಗೆಕೋರರ: rebel leader ದಂಗೆಕೋರರ ನಾಯಕ.
  2. ದಂಗೆ ಎದ್ದಿರುವ; ಬಂಡಾಯ ಹೂಡಿರುವ.
  3. ದಂಗೆಯ; ಬಂಡಾಯದ: rebel spirit ದಂಗೆ (ಏಳುವ) ಮನೋವೃತ್ತಿ.
See also 1rebel  2rebel
3rebel ರಿಬೆಲ್‍
ಅಕರ್ಮಕ ಕ್ರಿಯಾಪದ
[ಭೂತರೂಪ ಮತ್ತು ಭೂತಕೃದಂತ rebelled (ಅಮೆರಿಕನ್‍ ಪ್ರಯೋಗ rebeled);
  1. (ಸರ್ಕಾರಕ್ಕೆ ಎದುರಾಗಿ) ದಂಗೆ ಏಳು; ಬಂಡಾಯ ಹೂಡು.
  2. (ಯಾವುದೇ ಬಗೆಯ ಅಧಿಕಾರ, ನಿರ್ಬಂಧ, ಸಂಪ್ರದಾಯ ಮೊದಲಾದವನ್ನು) ಪ್ರತಿಭಟಿಸು; ವಿರೋಧಿಸು (ಅಧಿಕಾರ ಮೊದಲಾದವುಗಳ) ವಿರುದ್ಧ ಎದ್ದುನಿಲ್ಲು.
  3. ಹೇಸಿಗೆ ಪಟ್ಟುಕೊ; ಜುಗುಪ್ಸೆಪಡು: my soul rebels at any form of violence ಯಾವುದೇ ಬಗೆಯ ಹಿಂಸಾಚಾರಕ್ಕೆ ನನ್ನ ಅಂತರಾತ್ಮ ಹೇಸಿಕೆ ಪಟ್ಟುಕೊಳ್ಳುತ್ತದೆ.