reasoning ರೀಸನಿಂಗ್‍
ನಾಮವಾಚಕ
  1. ತರ್ಕ; ವಾದ; ತರ್ಕಿಸುವ ಯಾ ವಾದಮಾಡುವ ಶಕ್ತಿ.
  2. ತರ್ಕ; ತಾರ್ಕಿಕ ವಿಧಾನ; ತಾರ್ಕಿಕ (ಪ್ರಯೋಗ)ಕ್ರಿಯೆ; ವಾಸ್ತವಾಂಶಗಳಿಂದ ಯಾ ದತ್ತವಾದ ಪ್ರತಿಜ್ಞೆಗಳಿಂದ ನಿರ್ಣಯವನ್ನು ಅನುಮಾನಿಸುವುದು, ತೀರ್ಮಾನವನ್ನು ಮಾಡುವಿಕೆ.
  3. ತರ್ಕ; ತರ್ಕಫಲ; ತರ್ಕದ ಫಲವಾದ ಯಾ ತರ್ಕದಿಂದ ಹುಟ್ಟಿದ ವಾದಗಳು ನಿರ್ಣಯಗಳು ಯಾ ಸಮರ್ಥನೆಗಳು.