reasonable ರೀಸನಬ್‍ಲ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) ತರ್ಕಶಕ್ತಿಯುಳ್ಳ; ತರ್ಕಬದ್ಧವಾಗಿ ಚಿಂತಿಸುವ, ವಾದಿಸುವ, ನಿರ್ಣಯಿಸುವ ಶಕ್ತಿಯುಳ್ಳ.
  2. ವಿವೇಕದ; ವಿವೇಚನಾಶಕ್ತಿಯುಳ್ಳ; ಯುಕ್ತಾಯುಕ್ತ ಪರಿಜ್ಞಾನವುಳ್ಳ; ನ್ಯಾಯವಾದ ಮಾತಿಗೆ ಕಿವಿಗೊಡುವ.
  3. ವಿವೇಕಯುಕ್ತ; ನ್ಯಾಯಸಮ್ಮತ.
  4. ತರ್ಕಬದ್ಧ; ಅಸಂಗತವಲ್ಲದ; ಅಸಮಂಜಸವಲ್ಲದ.
  5. ಅತಿರೇಖವಾಗಿರದ; ನ್ಯಾಯದ ಎಲ್ಲೆಯನ್ನು ಮೀರಿರದ.
  6. ನ್ಯಾಯವಾದ; ಮಧ್ಯಸ್ಥ; ಅತಿ ಹೆಚ್ಚಾಗಲಿ ಕಡಮೆಯಾಗಲಿ ಆಗಿರದ; ಉಚಿತ ಪ್ರಮಾಣದ.
  7. (ಬೆಲೆಗಳು ಮೊದಲಾದವುಗಳ ವಿಷಯದಲ್ಲಿ)
    1. ನ್ಯಾಯವಾದ; ದುಬಾರಿಯಾಗಿರದ; ಅತಿಯಲ್ಲದ.
    2. ಸಾಧಾರಣವಾಗಿರುವ; ಸಮ್ಮತವಾಗಿರುವ; ಮಧ್ಯಸ್ಥವಾದ: reasonable price ಮಧ್ಯಸ್ಥಬೆಲೆ.