See also 2reason
1reason ರೀಸನ್‍
ನಾಮವಾಚಕ
  1. ಕಾರಣ; ವಾದ, ಮನಃಪ್ರೇರಣೆ, ಧ್ಯೇಯ, ಹೇಳಿಕೆಯ ಸಮರ್ಥನೆಗಳನ್ನು ರುಜುವಾತುಪಡಿಸುವುದಕ್ಕಾಗಿ ಮಂಡಿಸುವ ವಾಸ್ತವಾಂಶ: prove with reasons ಕಾರಣಗಳಿಂದ ಸಮರ್ಥಿಸು, ರುಜುವಾತು ಮಾಡಿಕೊಡು.
  2. (ತರ್ಕಶಾಸ್ತ್ರ) (ಸಿಲೊಜಿಸಂ ತರ್ಕಸರಣಿಯಲ್ಲಿ ನಿರ್ಣಯಿಸಿದ ಅನುಮಾನವನ್ನು ಮೊದಲೇ ಹೇಳಿ, ಬಳಿಕ ಅದಕ್ಕೆ ಕಾರಣವಾಗಿ ಹೇಳಿದ) ಪ್ರಧಾನ ಯಾ ಉಪಪ್ರತಿಜ್ಞೆ (ಮುಖ್ಯವಾಗಿ ಉಪಪ್ರತಿಜ್ಞೆ), ಉದಾಹರಣೆಗೆ
    1. all men are mortal, and Socrates is mortal, for he is a man.
    2. Socrates is a man, and he is mortal as all men are mortal.
  3. ತರ್ಕ (ಶಕ್ತಿ); ಪ್ರತಿಜ್ಞಾ ವಾಕ್ಯಗಳಿಂದ ಅನುಮಾನವನ್ನು ನಿರ್ಣಯಿಸುವ, ಮಾನವನ ವಿಶಿಷ್ಟ ಲಕ್ಷಣವಾದ ಬುದ್ಧಿಸಾಮರ್ಥ್ಯ.
  4. (ವ್ಯಕ್ತೀಕರಿಸಿದ) ಬುದ್ಧಿ: God and reason are identical ಭಗವಂತ ಹಾಗೂ ಬುದ್ಧಿ ಎಂಬವು ಅನನ್ಯವಾದವು; ಭಗವಂತ ಎಂದರೂ ಒಂದೇ ಬುದ್ಧಿ ಎಂದರೂ ಒಂದೇ.
  5. ಬುದ್ಧಿ; ಚಿತ್ತಾಸ್ವಾಸ್ಥ್ಯ: he has lost his reason ಅವನಿಗೆ ಚಿತ್ತಸ್ವಾಸ್ಥ್ಯ ಕೆಟ್ಟಿದೆ.
  6. ವಿವೇಕ; ವಿವೇಚನೆ:
    1. ವ್ಯವಾಹಾರ ಜ್ಞಾನ; ವಿವೇಕಯುತ ವರ್ತನೆ; ನ್ಯಾಯನೀತಿ.
    2. ಲೋಕ ಮರ್ಯಾದೆ; ಲೋಕರೂಢಿ; ವಿಹಿತವಾದ, ಅತಿರೇಕಕ್ಕೆ ಹೋಗದ, ಎಲ್ಲೆಮೀರದ ವರ್ತನೆ: I will do anything in reason ಲೋಕಮರ್ಯಾದೆಗೆ ಒಳಪಟ್ಟ ಯಾವುದನ್ನೇ ಆಗಲಿ ಮಾಡಲು ನಾನು ಸಿದ್ಧ.
    3. ನ್ಯಾಯಸಮ್ಮತವಾದದ್ದು; ಯುಕ್ತವಾದದ್ದು.
    4. ನ್ಯಾಯ; ನ್ಯಾಯಸಮ್ಮತವಾದ, ಯುಕ್ತವಾದ ಮಾತು: hear reason ನ್ಯಾಯವನ್ನು ಕೇಳು. listen to reason ಯುಕ್ತವಾದ ಮಾತಿಗೆ ಕಿವಿಗೊಡು.
    5. ಯುಕ್ತಾಯುಕ್ತ ಪರಿಜ್ಞಾನ; ನ್ಯಾಯಯುಕ್ತತೆ; ಔಚಿತ್ಯ: there is reason in what he says ಅವನು ಹೇಳುವುದರಲ್ಲಿ ಔಚಿತ್ಯವಿದೆ.
  7. ಉದ್ದೇಶ; ಕಾರಣ; ಸಮರ್ಥನೆ: has good reasons for doing this ಇದನ್ನು ಮಾಡಲು ಒಳ್ಳೆಯ ಕಾರಣಗಳನ್ನು ಹೊಂದಿದ್ದಾನೆ. no reason to be angry ಸಿಟ್ಟಾಗಲು ಕಾರಣವಿಲ್ಲ.
  8. ಸಹಜಜ್ಞಾನ; ಅಂತರ್ಬೋಧೆ; ಬುದ್ಧಿ, ಗ್ರಹಣಶಕ್ತಿಯನ್ನು ಮೀರಿದ ನಿಗಮನ ತರ್ಕಸೂತ್ರಗಳನ್ನು ಒದಗಿಸುವ ಸಹಜಜ್ಞಾನಶಕ್ತಿ.
ಪದಗುಚ್ಛ
  1. as reason was ವಿವೇಚನೆಗೆ ತೋರಿದಂತೆ; ವಿವೇಚನೆಯು ಪ್ರೇರೇಪಿಸಿದಂತೆ.
  2. bring to reason ನ್ಯಾಯದ ದಾರಿಗೆ ಯಾ ವಿವೇಕದ ಮಾರ್ಗಕ್ಕೆ ತರು.
  3. by reason of ಆ ಕಾರಣದಿಂದ: the institution failed by reason of its bad organisation ಆ ಸಂಸ್ಥೆಯು ಅದರ ಅಭದ್ರವಾದ ಸಂಘಟನೆಯಿಂದ ವಿಫಲಗೊಂಡಿತು.
  4. have reason (ನಿನಗೆ) ಯುಕ್ತಾಯುಕ್ತ ಪರಿಜ್ಞಾನ ಇರಲಿ; ಔಚಿತ್ಯಜ್ಞಾನ ಇರಲಿ.
  5. in (or within) reason ವಿವೇಚನೆಯ ಯಾ ಮಿತಿಯ ಎಲ್ಲೆಯೊಳಗೆ.
  6. listen to reason ವಿವೇಕದಿಂದ ವರ್ತಿಸುವಂತೆ ಆಗು; ನ್ಯಾಯಕ್ಕೆ ಕಿವಿಗೊಡು.
  7. see reason
    1. ವಾದದ ಯುಕ್ತತೆಯನ್ನು ಅರಿ.
    2. ಬುದ್ಧಿಬರು; ವಿವೇಕ ತಂದುಕೊ, ಗಳಿಸಿಕೊ, ಪಡೆದುಕೊ; ವಿವೇಕದಿಂದ ವರ್ತಿಸು.
  8. stand to reason
    1. ವಿಸ್ಪಷ್ಟವಾಗಿರು: it stands to reason that nobody will work without pay ಸಂಬಳವಿಲ್ಲದೆ ಯಾರೂ ದುಡಿಯುವುದಿಲ್ಲ ಎಂಬುದು ಎಲ್ಲರಿಗೂ ಸ್ಪಷ್ಟವಾದ, ತಿಳಿದ ಸಂಗತಿ.
    2. ತರ್ಕಸಮ್ಮತವೆನಿಸು: what he says stands to reason ಅವನು ಹೇಳುವುದು ತರ್ಕಸಮ್ಮತವೆನಿಸುತ್ತದೆ.
  9. with reason ಸಕಾರಣವಾಗಿ; ನ್ಯಾಯವಾಗಿ: he complains with reason ಅವನು ಸಕಾರಣವಾಗಿಯೇ ದೂರುತ್ತಿದ್ದಾನೆ; ಅವನು ದೂರುತ್ತಿರುವುದು ನ್ಯಾಯವಾಗಿಯೇ ಇದೆ.
  10. without rhyme or reason ನ್ಯಾಯ – ನೀತಿ ಯಾವುದೂ ಇಲ್ಲದೆ.
  11. woman’s reason ಸ್ತ್ರೀತರ್ಕ; ಹೆಂಗಸಿನ ವಾದ ಸರಣಿ, ರೀತಿ; ಒಂದು ಹೇಳಿಕೆಗೆ ಆ ಹೇಳಿಕೆಯನ್ನೇ ಕಾರಣವನ್ನಾಗಿ ಯಾ ವಿವರಣೆಯನ್ನಾಗಿ ಪುನರುಚ್ಚರಿಸುವುದು; ಪುನರುಕ್ತಿ ತರ್ಕ, ಉದಾಹರಣೆಗೆ I love him because I love him ಅವನನ್ನು ಪ್ರೀತಿಸುವುದರಿಂದ ನಾನವನನ್ನು ಪ್ರೀತಿಸುತ್ತೇನೆ.
See also 1reason
2reason ರೀಸನ್‍
ಸಕರ್ಮಕ ಕ್ರಿಯಾಪದ
  1. ವಾದದ ಮೂಲಕ ನಿರ್ಣಯಿಸು ಯಾ ದೃಢವಾಗಿ ಪ್ರತಿಪಾದಿಸು.
  2. (ಯಾವುದೇ ವಿಷಯದ ಬಗೆಗೆ ಏನು, ಏಕೆ, ಹೇಗೋ ಹಾಗೆ ಎಂದು ಮುಂತಾಗಿ ತನ್ನಲ್ಲೇ ಯಾ ಒಬ್ಬರೊಡನೆ) ಚರ್ಚಿಸು; ವಿಚಾರಮಾಡು.
  3. ಎಂದು – ನಿರ್ಣಯಿಸು, ತೀರ್ಮಾನಿಸು, ಅನುಮಾನಿಸು.
  4. (ವಾದಸರಣಿಯಲ್ಲಿ) ಒಂದು ಹಂತವಾಗಿ, ಪ್ರತಿಜ್ಞಾವಾಕ್ಯವಾಗಿ ಯಾ ವಾದವಾಗಿ ಇಟ್ಟುಕೊ.
  5. ವಾದರೂಪದಲ್ಲಿ ಹೇಳು.
  6. (ವಿಷಯವನ್ನು) ತರ್ಕಬದ್ಧವಾಗಿ ನಿರೂಪಿಸು; ತಾರ್ಕಿಕವಾಗಿ ಪ್ರತಿಪಾದಿಸು; ಸುಸಂಗತವಾಗಿ ನಿರೂಪಿಸು: a reasoned exposition ತರ್ಕಬದ್ಧವಾದ, ಸುಸಂಗತವಾದ ನಿರೂಪಣೆ.
  7. (ಒಬ್ಬನೊಡನೆ ವಾದಮಾಡಿ ಒಂದು ಅಭಿಪ್ರಾಯವನ್ನು) ಒಪ್ಪುವಂತೆ ಯಾ ನಿರಾಕರಿಸುವಂತೆ ಮಾಡು: reason one into (ಒಬ್ಬನೊಡನೆ) ವಾದಮಾಡಿ (ಒಂದು ಅಭಿಪ್ರಾಯವನ್ನು) ಒಪ್ಪುವಂತೆ ಮಾಡು. reason one out of (ಒಬ್ಬನೊಡನೆ) ವಾದಮಾಡಿ (ಒಂದು ಅಭಿಪ್ರಾಯವನ್ನು) ನಿರಾಕಾರಿಸುವಂತೆ ಮಾಡು.
  8. (ನಡೆಯುತ್ತಿರುವುದರ ಯಾ ಮಾಡುತ್ತಿರುವುದರ) ಪರಿಣಾಮ ಯಾ ಫಲಗಳನ್ನು ಪರ್ಯಾಲೋಚಿಸು.
  9. (ತಿದ್ದುಪಡಿ ಮೊದಲಾದವುಗಳಲ್ಲಿ) ಕಾರಣವನ್ನು ಸೇರಿಸು, ಅಂತರ್ಗತಗೊಳಿಸು.
ಅಕರ್ಮಕ ಕ್ರಿಯಾಪದ
  1. ತರ್ಕಿಸು; ತರ್ಕಬದ್ಧವಾದ ಯಾ ಪರಸ್ಪರ ಸಂಬಂಧಿಸಿದ ಚಿಂತನೆಯ ಮೂಲಕ ನಿರ್ಣಯವನ್ನು ರೂಪಿಸು ಯಾ ರೂಪಿಸಲು ಪ್ರಯತ್ನಿಸು.
  2. (ಒಬ್ಬನ ಮನವೊಪ್ಪಿಸಲು ಅವನೊಡನೆ) ವಾದ ಮಾಡು; ಚರ್ಚಿಸು; ವಿಚಾರಮಾಡು: reason with a person ಒಬ್ಬ ವ್ಯಕ್ತಿಯೊಡನೆ (ಅವನ ಮನವೊಪ್ಪಿಸಲು) ವಾದ ಮಾಡು.
ಪದಗುಚ್ಛ

a reasoned amendment (ಚರ್ಚೆಗೆ ಮಾರ್ಗನಿರ್ದೇಶನ ಮಾಡಲು ಜೊತೆಯಲ್ಲೇ ಕಾರಣಗಳನ್ನು ಕೊಟ್ಟಿರುವ) ಸಕಾರಣ ತಿದ್ದುಪಡಿ.