reap ರೀಪ್‍
ಸಕರ್ಮಕ ಕ್ರಿಯಾಪದ
  1. (ಸುಗ್ಗಿಯಲ್ಲಿ ಗದ್ದೆ, ಹೊಲ ಯಾ ಪಯಿರನ್ನು) ಕೊಯ್ಯು; ಕೊಯ್ಲು ಮಾಡು; ಕಟಾವು ಮಾಡು; ಕಟಾಯಿಸು.
  2. ಬೆಳೆಯನ್ನು ಫಸಲನ್ನು ಕೊಯಿದು ಸಂಗ್ರಹಿಸು.
  3. (ರೂಪಕವಾಗಿ) ಬೆಳೆದದ್ದನ್ನು ಉಣ್ಣು; (ಮಾಡಿದ್ದರ) ಫಲವನ್ನು ಅನುಭವಿಸು, ಅನುಭೋಗಿಸು: reap the fruits of one’s actions ತಾನು ಮಾಡಿದ ಕರ್ಮಗಳ ಫಲವನ್ನು ಅನುಭವಿಸು.
ಅಕರ್ಮಕ ಕ್ರಿಯಾಪದ

ಫಸಲು, ಬೆಳೆ – ಸಂಗ್ರಹಿಸು; (ಗದ್ದೆ ಮೊದಲಾದವುಗಳ ) ಕೊಯ್ಲು ಮಾಡು; ಕಟಾವು ಮಾಡು.

ಪದಗುಚ್ಛ
  1. sow the wind and reap the whirlwind ಘೋರ ದುಷ್ಕೃತ್ಯಕ್ಕೆ ಘೋರತರ ಸಂಕಟವನ್ನು ಯಾ ಶಿಕ್ಷೆಯನ್ನು ಅನುಭವಿಸು.
  2. reap where one has not sown ಬಿತ್ತದೆ ಬೆಳೆ ಪಡೆ; (ತನ್ನ ಪ್ರಯತ್ನ ಯಾ ಪರಿಶ್ರಮ ಇಲ್ಲದೆ) ಪರರ ಪ್ರಯತ್ನ ಯಾ ಪರಿಶ್ರಮದಿಂದ ಲಾಭ ಪಡೆ.