really ರಿಅಲಿ
ಕ್ರಿಯಾವಿಶೇಷಣ
  1. ನಿಜವಾಗಿ; ದಿಟವಾಗಿ; ಸತ್ಯವಾಗಿ: a really honest man ನಿಜವಾಗಿಯೂ ಪ್ರಾಮಾಣಿಕ ವ್ಯಕ್ತಿ.
  2. ವಾಸ್ತವವಾಗಿ; ವಸ್ತುತಃ: to see things as they really are ವಸ್ತುಗಳನ್ನು ಅವು ವಾಸ್ತವವಾಗಿ ಇರುವಂತೆಯೇ ನೋಡುವುದು.
  3. (ಬಲವಾದ ಸಮರ್ಥನೆಯಾಗಿ) ನಿಜಕ್ಕೂ: really , this is too much ನಿಜಕ್ಕೂ, ಇದು ಬಹಳವಾಯಿತು, ಇದು ಅತಿರೇಕದ ಮಾತು.
  4. ಲಘು ಪ್ರತಿಭಟನೆಯನ್ನು ಯಾ ಆಶ್ವರ್ಯವನ್ನು ಸೂಚಿಸುವಲ್ಲಿ ಪ್ರಯೋಗ.
  5. (ಪ್ರಶ್ನಾರ್ಥಕವಾಗಿ) (ಅಪನಂಬಿಕೆ ಸೂಚಿಸುವಲ್ಲಿ) ಹೌದೇ? ನಿಜವೇ? They’re musicians. -Really? ಅವರು ಸಂಗೀತಗಾರರು, -ನಿಜವೇ? ನಿಜವಾಗಿಯೂ? shut up! well really! “ಬಾಯಿಮುಚ್ಚು” “ಹಾಂ! ನಿಜವಾಗಿ!”. “I am going abroad”. “oh, really!” “ನಾನು ವಿದೇಶಕ್ಕೆ ಹೋಗುತ್ತಿದ್ದೇನೆ” “ಓ, ನಿಜವಾಗಿ!”