realize ರಿಅಲೈಸ್‍ಕೆ -೧
ಸಕರ್ಮಕ ಕ್ರಿಯಾಪದ
  1. (ಇಷ್ಟಾರ್ಥ, ಮನೋರಥ, ಯೋಜನೆ ಮೊದಲಾದವನ್ನು) ಕೈಗೂಡಿಸಿಕೊ; ನೆರವೇರಿಸಿಕೊ; ಸಾಧಿಸಿಕೊ; ನಿಜವಾಗಿಸಿಕೊ; ಸಫಲ ಮಾಡಿಕೊ: realized a childhood dream ಬಾಲ್ಯದ ಕನಸೊಂದನ್ನು ನನಸು ಮಾಡಿಕೊಂಡ, ನೆರವೇರಿಸಿಕೊಂಡ.
  2. ನಿಜವೆನ್ನುವಂತೆ ತೋರಿಸು; ವಾಸ್ತವಿಕಗೊಳಿಸು; ವಾಸ್ತವಿಕ ಎಂದು ತೋರುವಂತೆ ನಿರೂಪಿಸು, ಪ್ರದರ್ಶಿಸು: these details help to realize the scene ಈ ವಿವರಗಳು ಆ ದೃಶ್ಯಕ್ಕೆ ವಾಸ್ತವಿಕತೆಯನ್ನುಂಟುಮಾಡುತ್ತವೆ; ಈ ವಿವರಗಳು ಆ ದೃಶ್ಯವನ್ನು ವಾಸ್ತವಿಕಗೊಳಿಸುತ್ತವೆ.
  3. ಮನಗಾಣು; ಸ್ಪಷ್ಟವಾಗಿ, ಪೂರ್ಣವಾಗಿ ಅರಿತುಕೊ: she suddenly realized the significance of his remark ಅವನ ಟೀಕೆಯ ಮರ್ಮವೇನೆಂಬುದನ್ನು ಆಕೆ ಇದ್ದಕ್ಕಿದ್ದಂತೆ ಮನಗಂಡಳು.
  4. (ಆಸ್ತಿಪಾಸ್ತಿ, ದಸ್ತಾವೇಜುಗಳು, ಮೊದಲಾದವನ್ನು) ಹಣರೂಪಕ್ಕೆ ಬದಲಾಯಿಸು; ನಗದುಗೊಳಿಸು: realize one’s securities ಸರಕಾರೀ ಯಾ ಬ್ಯಾಂಕಿನ ದಸ್ತಾವೇಜುಗಳನ್ನು ನಗದುಗೊಳಿಸು.
  5. ದುಡಿಮೆಯನ್ನು ಪ್ರತಿಫಲ ಯಾ ವೇತನವಾಗಿ, ಬಂಡವಾಳವನ್ನು ಯಾ ಮಾಡಿದ ವ್ಯಾಪಾರವನ್ನು ಲಾಭವಾಗಿ – ಪಡೆದುಕೊ.
  6. (ವಸ್ತುವಿಗೆ ಯಾವುದೇ) ಬೆಲೆಯನ್ನು ತರು, ತಂದುಕೊಡು; ಬೆಲೆಗೆ ಮಾರಾಟವಾಗು.
  7. (ಐಶ್ವರ್ಯವನ್ನು ಯಾ ನಿರ್ದೇಶಿಸಿದಷ್ಟು ಲಾಭವನ್ನು) ಗಳಿಸಿಕೊ; ಅರ್ಜಿಸಿಕೊ.
  8. (ಸಂಗೀತ) ಚಿಕ್ಕ ರಾಗ ಯಾ ಲಯ ಭಾಗವನ್ನು ಅದರ ಪೂರ್ಣಪ್ರಮಾಣಕ್ಕೆ ಬೆಳಸು.