reality ರಿಆಲಿಟಿ
ನಾಮವಾಚಕ
  1. ದಿಟ; ಸತ್ಯತೆ; ನಿಜಸ್ಥಿತಿ.
  2. ಯಥಾರ್ಥತೆ; ಮೂಲ ವಸ್ತುವಿಗೆ ತದ್ವತ್ತಾದ ಹೋಲಿಕೆ; ಯಥಾವತ್ತಾದ ರೂಪ: reproduced with startling reality ಚಕಿತಗೊಳಿಸುವಷ್ಟು ಯಥಾವತ್ತಾಗಿ ಚಿತ್ರಿಸಿದ ಯಾ ರೂಪಿಸಿದ.
  3. ಸತ್ಯಾಂಶ; ನಿಜವಾದ ಸಂಗತಿ; ವಾಸ್ತವಾಂಶ.
  4. (ತತ್ತ್ವಶಾಸ್ತ್ರ) ಸತ್ಯ; ನಿಜವಾಗಿ ಇರುವುದು, ಅಸ್ತಿತ್ವದಲ್ಲಿರುವುದು; ನಿಜವಾದದ್ದು; ಮಿಥ್ಯಾಭಾಸಗಳ, ತೋರ್ಕೆಗಳ ಹಿಂದೆ ಅಡಗಿರುವ ಸತ್ಯ:
    1. ಭಾವನೆಗೆ ಆಧಾರವಾದ ಮತ್ತು ಅದಕ್ಕಿಂತ ಭಿನ್ನವಾಗಿ ಅಸ್ತಿತ್ವವುಳ್ಳ – ವಸ್ತು, ವಿಷಯ.
    2. ಇಂದ್ರಿಯಗೋಚರವಾಗಿ, ಬಾಹ್ಯ ಪ್ರಪಂಚದಲ್ಲಿ, ಅಸ್ತಿತ್ವವುಳ್ಳ ವಸ್ತು.
  5. ನಿಜ ಸ್ವಭಾವ ಯಾ ನಿಜಸ್ವರೂಪ.
  6. ಯಥಾವತ್ತಾಗಿರುವುದು; ಮೂಲವನ್ನು ಹೋಲುವುದು: the model was impressive in its reality ಮೂಲವನ್ನು ಹೋಲುವುದರಲ್ಲಿ ಮಾದರಿಯು ಪರಿಣಾಮಕಾರಿಯಾಗಿತ್ತು.
ಪದಗುಚ್ಛ

in reality ವಸ್ತುತಃ; ನಿಜವಾಗಿ; ವಾಸ್ತವವಾಗಿ.