realistic ರಿಅಲಿಸ್ಟಿಕ್‍
ಗುಣವಾಚಕ
  1. ವಾಸ್ತವಿಕ; ಇದ್ದದ್ದನ್ನು ಇದ್ದಂತೆಯೇ ಕಾಣುವ ಯಾ ನಿರೂಪಿಸುವ.
  2. ವ್ಯಾವಹಾರಿಕ; (ಆಚರಣೆಗೆ ತರಲು ಕಷ್ಟವಾದ ಬರಿಯ ಆದರ್ಶಗಳಿಗೆ ಬದಲು) ಕಾರ್ಯರೂಪಕ್ಕೆ ತರಲು ಸಾಧ್ಯವಾದ ವಿಷಯಗಳಲ್ಲಿ ಆಸಕ್ತಿ, ನಂಬಿಕೆಉಳ್ಳ.
  3. (ಲಲಿತಕಲೆ, ಸಾಹಿತ್ಯಗಳಲ್ಲಿ) ವಾಸ್ತವಿಕದೃಷ್ಟಿಯ; ಯಥಾರ್ಥ ಮನೋವೃತ್ತಿಯ; ಇಂದ್ರಿಯಗೋಚರವಾದ ವಿಷಗಳನ್ನು, ಮಾನವನನ್ನು, ಜೀವನದ ಘಟನೆಗಳನ್ನು ಯಥಾವತ್ತಾಗಿ ನಿರೂಪಿಸುವ.
  4. (ತತ್ತ್ವಶಾಸ್ತ್ರ)
    1. ಭಾವಸತ್ತಾವಾದದ; ಭಾವಾಸ್ತಿತ್ವವಾದದ; ಅಮೂರ್ತ ಭಾವಭಾವನೆಗಳಿಗೆ ಯಾ ಜಾತಿ ಸಾಮಾನ್ಯ ಕಲ್ಪನೆಗಳಿಗೆ ಬಾಹ್ಯ ಪ್ರಪಂಚದಲ್ಲಿ ಅಸ್ತಿತ್ವವುಂಟೆಂದು ಪ್ರತಿಪಾದಿಸುವ.
  5. ವಾಸ್ತವವಾದದ; ವಸ್ತುಸತ್ತಾವಾದದ; ಇಂದ್ರಿಯಗೋಚರವಾದ ಜಡವಸ್ತುಗಳಿಗೆ ನಿಜವಾದ ಅಸ್ತಿತ್ವವುಂಟೆಂದು ಪ್ರತಿಪಾದಿಸುವ.