realist ರಿಅಲಿಸ್ಟ್‍
ನಾಮವಾಚಕ
  1. ವಾಸ್ತವವಾದಿ; ಯಥಾರ್ಥವಾದಿ; ಇದ್ದದ್ದನ್ನು ಇದ್ದಂತೆಯೇ ಕಾಣುವವನು ಯಾ ನಿರೂಪಿಸುವವನು.
  2. (ಲಲಿತಕಲೆ, ಸಾಹಿತ್ಯಗಳಲ್ಲಿ) ಯಥಾರ್ಥವಾದಿ; ವಾಸ್ತವಿಕತಾವಾದಿ; ಇಂದ್ರಿಯ ಗೋಚರವಾದ ವಸ್ತುಗಳನ್ನು ಯಾ ಮಾನವನನ್ನು ಹಾಗೂ ಜೀವನದ ಘಟನೆಗಳನ್ನು ಯಥಾವತ್ತಾಗಿ ರೂಪಿಸುವವನು.
  3. (ತತ್ತ್ವಶಾಸ್ತ್ರ)
    1. ಭಾವಸತ್ತಾವಾದಿ; ಭಾವಾಸ್ತಿತ್ವವಾದಿ; ಅಮೂರ್ತ ಭಾವಭಾವನೆಗಳಿಗೆ ಯಾ ಜಾತಿಸಾಮಾನ್ಯದ ಕಲ್ಪನೆಗಳಿಗೆ ಬಾಹ್ಯ ಪ್ರಪಂಚದಲ್ಲಿ ಅಸ್ತಿತ್ವವುಂಟೆಂದು ಪ್ರತಿಪಾದಿಸುವವನು.
    2. ವಾಸ್ತವವಾದಿ; ವಸ್ತುಸತ್ತಾವಾದಿ; ಇಂದ್ರಿಯಗೋಚರವಾದ ಜಡದ್ರವ್ಯಕ್ಕೆ ಬಾಹ್ಯ ಅಸ್ತಿತ್ವವುಂಟೆಂದು ಪ್ರತಿಪಾದಿಸುವವನು.