realism ರೀಅಲಿಸಮ್‍
ನಾಮವಾಚಕ
  1. ವ್ಯಾವಹಾರಿಕತೆ; ವ್ಯಾವಹಾರಿಕ ಮನೋವೃತ್ತಿ; (ಆದರ್ಶ ತತ್ತ್ವಗಳಿಗೆ ಭಿನ್ನವಾಗಿ) ಕಾರ್ಯರೂಪಕ್ಕೆ ತರಲು ಸಾಧ್ಯವಾಗುವ, ವ್ಯವಹಾರ ಯೋಗ್ಯವಾದ ವಿಷಯಗಳಲ್ಲಿ ಆಸಕ್ತಿ ಹಾಗೂ ನಂಬಿಕೆ.
  2. ವಾಸ್ತವಿಕತೆ; ವಾಸ್ತವಿಕ – ದೃಷ್ಟಿ, ಮನೋವೃತ್ತಿ; (ಕಲ್ಪಿತ ಯಾ ಊಹನ ಲೋಕಕ್ಕೆ ಭಿನ್ನವಾಗಿ) ದಿಟವಾದ ಜಗತ್ತಿನಲ್ಲಿ ಆಸಕ್ತಿ ಮತ್ತು ನಂಬಿಕೆ.
  3. ಯಥಾರ್ಥತೆ; ಇದ್ದದ್ದನ್ನು ಇದ್ದಂತೆಯೇ ಕಾಣುವ ಮತ್ತು ನಿರೂಪಿಸುವ ಪ್ರವೃತ್ತಿ.
  4. (ಲಲಿತಕಲೆಗಳ ವಿಷಯದಲ್ಲಿ)
    1. ಯಥಾರ್ಥತೆ; ವಾಸ್ತವಿಕತೆ; (ವ್ಯಕ್ತಿಗಳು, ವಸ್ತುಗಳು, ದೃಶ್ಯಗಳು, ಮೊದಲಾದವನ್ನು) ಇಂದ್ರಿಯಗಳಿಗೆ ಗೋಚರವಾದಂತೆ, ಎಂದರೆ ಅವುಗಳ ರೂಪ, ವರ್ಣ, ಮೊದಲಾದವನ್ನು ಯಥಾವತ್ತಾಗಿ ನಿರೂಪಿಸುವುದು.
    2. ನೈಸರ್ಗಿಕತೆ; ಪ್ರಕೃತಿಯನ್ನು ಯಥಾವತ್ತಾಗಿ ಪ್ರತಿಬಿಂಬಿಸುವುದು.
    3. ಮಾನವನನ್ನು ಮತ್ತು ಜೀವನದ ಘಟನೆಗಳನ್ನು ಯಥಾವತ್ತಾಗಿ ನಿರೂಪಿಸುವುದು.
  5. (ತತ್ತ್ವಶಾಸ್ತ್ರ)
    1. ಭಾವಸತ್ತಾವಾದ; ಭಾವಸತ್ಯತ್ವವಾದ; ಅಮೂರ್ತ ಭಾವನೆಗಳಿಗೆ ಯಾ ಜಾತಿಸಾಮಾನ್ಯ ಕಲ್ಪನೆಗಳಿಗೆ (ಮನಸ್ಸಿನಿಂದ ಹೊರಗಿನ) ಬಾಹ್ಯಪ್ರಪಂಚದಲ್ಲಿ ಅಸ್ತಿತ್ವ ಉಂಟೆಂಬ ವಾದ.
    2. ವಾಸ್ತವತೆ; ವಸ್ತುಸತ್ತಾವಾದ; ಇಂದ್ರಿಯಗೋಚರವಾದ ಜಡದ್ರವ್ಯಕ್ಕೆ ನಿಜವಾದ ಬಾಹ್ಯ ಅಸ್ತಿತ್ವ ಉಂಟೆಂಬ ವಾದ.