See also 2real  3real  4real
1real ರೇಅಲ್‍
ನಾಮವಾಚಕ

(ಚರಿತ್ರೆ) ರೇಯಾಲ್‍; ಸ್ಪೇನ್‍ ಮತ್ತು ಸ್ಪ್ಯಾನಿಷ್‍ ಅಮೆರಿಕದಲ್ಲಿ ಹಿಂದೆ ಚಲಾವಣೆಯಲ್ಲಿದ್ದ, ಪೆಸೋ ನಾಣ್ಯದ 1/8 ಪಾಲು ಬೆಲೆಯ, ಬೆಳ್ಳಿಯ ನಾಣ್ಯ ಯಾ ಪೆಸೆಟಾ ನಾಣ್ಯದ 1/4 ಪಾಲು ಬೆಲೆಯ ಕಚ್ಚಾಲೋಹದ ನಾಣ್ಯ.

See also 1real  3real  4real
2real ರೀಲ್‍
ಗುಣವಾಚಕ
  1. ದಿಟವಾದ; ನಿಜವಾದ; ಕಲ್ಪಿತವಲ್ಲದ; ವಾಸ್ತವವಾದ; ವಸ್ತುವಾಗಿ ನಿಜವಾಗಿ ಇರುವ ಯಾ ಸಂಗತಿಯಾಗಿ ನಿಜವಾಗಿ ಸಂಭವಿಸುವ: a story taken from real life ನಿಜವಾದ, ವಾಸ್ತವ ಜೀವನದಿಂದಲೇ ತೆಗೆದುಕೊಂಡ ಕಥೆ.
  2. ದಿಟವಾದ; ನಿಜವಾದ; ಯಥಾರ್ಥವಾದ; ಹೆಸರಿಗೆ ಮಾತ್ರವಲ್ಲದ; ನಾಮ್‍ಕೇವಾಸ್ತೆ ಅಲ್ಲದ: who is the real manager? ದಿಟವಾದ ವ್ಯವಸ್ಥಾಪಕ ಯಾರು?
  3. ದಿಟವಾಗಿ ಇರುವ; ನಿಜವಾಗಿ ಅಸ್ತಿತ್ವವುಳ್ಳ; ವಾಸ್ತವಿಕವಾದ; ಕೇವಲ ತೋರ್ಕೆಯದಲ್ಲದ: real object and its image ನಿಜವಾದ ವಸ್ತು ಮತ್ತು ಅದರ ಪ್ರತಿಬಿಂಬ.
  4. ನಿಜ; ಸತ್ಯವಾದ; ಬರಿಯ ಮಾತಲ್ಲದ: a real victory ನಿಜಗೆಲುವು.
  5. ಸಾಚಾ; ಅಸಲಿ; ಖೋಟಾ ಅಲ್ಲದ; ನಿಜವಾದ; ಕೃತಕವಲ್ಲದ: the real thing ಅಸಲಿವಸ್ತು; ಸಾಚಾಮಾಲು; (ಖೋಟಾ ಯಾ ಕಳಪೆ ಅಲ್ಲದ) ನಿಜವಾದ ಸರಕು. a real diamond (ಕೃತಕವಲ್ಲದ) ನಿಜವಾದ ವಜ್ರ.
  6. ಕಪಟದ್ದಲ್ಲದ; ತೋರಿಕೆಯಲ್ಲದ; ನೈಜವಾದ; ಅಂತರಂಗದ: real sympathy ನಿಜವಾದ ಸಹಾನುಭೂತಿ.
  7. (ನ್ಯಾಯಶಾಸ್ತ್ರ) (ಭೂಮಿ, ಮನೆ, ಒಡವೆ ವಸ್ತು, ಮೊದಲಾದ) ವಸ್ತುರೂಪದ; ನಿಜವಾದ: real property (ನಿಜವಾದ) ವಸ್ತು ರೂಪದ ಆಸ್ತಿ; ಸ್ಥಿರಾಸ್ತಿ.
  8. (ತತ್ತ್ವಶಾಸ್ತ್ರ)
    1. ಅಸ್ತಿತ್ವವುಳ್ಳ; ನಿಜವಾದ.
    2. (ಪ್ರಕೃತದಲ್ಲೇ) ಇರುವ; ಈಗಲೇ ಇರುವ.
    3. (ಭಾವನಾಮಾತ್ರವಾಗಿರದೆ) ಮೂರ್ತರೂಪದಲ್ಲಿರುವ; ವಸ್ತುಭೂತವಾದ.
    4. ಸ್ವತಂತ್ರಸತ್ತಾವಾದ; ನಿರುಪಾಧಿಕಸತ್ತೆಯ; (ಇಂದ್ರಿಯಾನುಭವಕ್ಕೆ ಯಾ ಗೋಚರ ಪ್ರಪಂಚಕ್ಕೆ ಮಾತ್ರ ಸೇರಿದ್ದಾಗಿರದೆ) ಸ್ವಂತ ಸತ್ತೆಯಿರುವ.
  9. (ದೃಗ್‍ವಿಜ್ಞಾನ) ನಿಜ; (ಬಿಂಬ ಮೊದಲಾದವುಗಳ ವಿಷಯದಲ್ಲಿ) ತೆರೆಯ ಮೇಲೆ ಮೂಡುವ.
  10. (ಗಣಿತ) (ಸಂಖ್ಯೆ ಯಾ ಪರಿಮಾಣದ ವಿಷಯದಲ್ಲಿ) ಕಾಲ್ಪನಿಕ ಭಾಗವಿಲ್ಲದಿರುವ.
  11. ನಿಜವಾದ; ಯಥಾರ್ಥವಾದ; ಕೊಳ್ಳುವ ಬೆಲೆಯ ಆಧಾರದ ಮೇಲೆ ನಿರ್ಧಾರಿತವಾದ; ಹಣದ ಮೌಲ್ಯದಲ್ಲಿನ ವ್ಯತ್ಯಾಸಗಳಿಗೆ ಅನುಗುಣವಾಗಿ ಸರಿಹೊಂದಿಸಿದ: real value ನಿಜವಾದ ಬೆಲೆ; ಯಥಾರ್ಥ ಮೌಲ್ಯ. income in real terms ಹಣದ ಬೆಲೆಯ ನಿಜವಾದ ದರದ ಪ್ರಕಾರ ಇರುವ ಆದಾಯ; ವಾಸ್ತವವಾದ ಆದಾಯ.
See also 1real  2real  4real
3real ರೀಲ್‍
ನಾಮವಾಚಕ

ನಿಜವಾದದ್ದು: I deal only with reals ನಾನು ನಿಜವಾದವುಗಳಿಗೆ ಮಾತ್ರವೇ ಗಣನೆ ಕೊಡುತ್ತೇನೆ.

ಪದಗುಚ್ಛ
  1. for real (ಆಡುಮಾತು) ನಿಜವಾಗಿ; ಪ್ರಾಮಾಣಿಕವಾಗಿ; ಗಂಭೀರ ವಿಷಯವಾಗಿ.
  2. the real (ಕೇವಲ ಕಲ್ಪಿತವಲ್ಲದೆ) ನಿಜವಾದ ವಸ್ತು, ವಿಷಯ.
  3. the real thing = ಪದಗುಚ್ಛ\((2)\).
See also 1real  2real  3real
4real ರೀಲ್‍
ಕ್ರಿಯಾವಿಶೇಷಣ

(ಸ್ಕಾಟ್ಲೆಂಡ್‍ ಮತ್ತು ಅಮೆರಿಕನ್‍ ಪ್ರಯೋಗ) (ಆಡುಮಾತು) ನಿಜವಾಗಿ; ನಿಜಕ್ಕೂ: you did a real nice job ನೀನು ನಿಜಕ್ಕೂ ಸೊಗಸಾದ ಕೆಲಸ ಮಾಡಿದೆ.