See also 2reading
1reading ರೀಡಿಂಗ್‍
ನಾಮವಾಚಕ
  1. ಓದುವಿಕೆ; ಪಠನ; ವಾಚನ.
  2. ವಾಚನಗೋಷ್ಠಿ; ಮನರಂಜನೆಗಾಗಿ ನಾಟಕ, ಕವಿತೆ ಮೊದಲಾದವುಗಳನ್ನು ಓದುವ ಸಮಾರಂಭ, ಗೋಷ್ಠಿ: poetry reading ಕಾವ್ಯವಾಚನ (ಸಮಾರಂಭ).
  3. (ಸಂಗೀತಕೃತಿ, ನಾಟಕ ಮೊದಲಾದವುಗಳ) ವಾಚನ; ಅರ್ಥ ನಿರೂಪಣೆ; ಅನುವಾದ; ವ್ಯಾಖ್ಯಾನ: an expressive reading of Hamlet ಹ್ಯಾಮ್ಲೆಟ್‍ ನಾಟಕದ ಭಾವವ್ಯಂಜಕವಾದ ವಾಚನ, ಅರ್ಥನಿರೂಪಣೆ.
  4. ಓದು; ಪಾಂಡಿತ್ಯ; ಸಾಹಿತ್ಯದ ಯಾ ಶಾಸ್ತ್ರದ ಜ್ಞಾನ: a man of wide reading ವ್ಯಾಪಕವಾದ ಓದಿರುವ ಯಾ ಪಾಂಡಿತ್ಯವುಳ್ಲ ವ್ಯಕ್ತಿ.
  5. ಓದುವ ವಿಷಯ; ವಾಚನ ಸಾಮಗ್ರಿ: have plenty of reading with me ನನ್ನ ಬಳಿ ಬಹಳ ವಾಚನಸಾಮಗ್ರಿ ಇದೆ.
  6. (ಗ್ರಂಥದ) ಪಾಠ ಯಾ ಪಾಠಾಂತರ: the various readings of this line of Shakespeare ಷೇಕ್ಸ್‍ಪಿಯರ್‍ನ ಈ ಪಂಕ್ತಿಯ ವಿವಿಧ ಪಾಠಾಂತರಗಳು.
  7. (ಯಾವುದೇ ವಿಷಯಕ್ಕೆ ಒಬ್ಬನು ಕೊಡುವ) ಅರ್ಥವಿವರಣೆ; (ಯಾವುದೇ ವಿಷಯದ ಬಗೆಗೆ ಒಬ್ಬನ) ಗ್ರಹಿಕೆ, ಭಾವನೆ ಯಾ ಅಭಿಪ್ರಾಯ: what is your reading of the situation? ಆ ಸನ್ನಿವೇಶದ ಬಗೆಗೆ ನಿಮ್ಮ ಭಾವನೆಯೇನು?
  8. (ಮಾಪಕಯಂತ್ರಗಳು ತೋರಿಸುವ) ಅಂಕ; ಸೂಚ್ಯಂಕ; ಪ್ರಮಾಣಸಂಖ್ಯೆ: ಎಥೆ ಥೆಮೊಮೆತೆ ರೆಅದಿ ಇ $೩೦^ಚಿ$ ಉಷ್ಣಮಾಪಕದ ಸೂಚ್ಯಂಕವು $30^\circ$ ಆಗಿದೆ.
  9. (ಶಾಸನಸಭೆಯಲ್ಲಿ ಮಸೂದೆಯ) ಪಠನ; ಅಂಗೀಕಾರಕ್ಕಾಗಿ ಮಾಡುವ ವಾಚನ.
ಪದಗುಚ್ಛ
  1. dull reading ಓದಲು ನೀರಸವಾದ ವಿಷಯ.
  2. first reading (ಶಾಸನಸಭೆಯಲ್ಲಿ ಮಸೂದೆಯ) ಪ್ರಥಮ ಪಠನ; ಮಸೂದೆಯನ್ನು ಮಂಡಿಸಲು ಅನುಮತಿ ಕೋರಿ ಮಸೂದೆಯನ್ನು ಸ್ಥೂಲವಾಗಿ ಓದುವುದು.
  3. good reading ಓದಲು ಸ್ವಾರಸ್ಯವಾದ ವಿಷಯ.
  4. plenty of reading ಓದಲು ತುಂಬ ವಿಷಯ: there is a plenty of reading in it ಅದರಲ್ಲಿ ಓದಲು ತುಂಬ ವಿಷಯ ಇದೆ.
  5. second reading(ಬ್ರಿಟಿಷ್‍ ಪ್ರಯೋಗ) (ಮಸೂದೆಯ ಮುಖ್ಯಾಂಶಗಳನ್ನು ಅಂಗೀಕರಿಸಲು) ದ್ವೀತಿಯ ಪಠನ.
  6. third reading (ಬ್ರಿಟಿಷ್‍ ಪ್ರಯೋಗ) (ಸಭಾಸದಸ್ಯರು ಮಾಡಿದ ತಿದ್ದುಪಡಿಗಳನ್ನು ಮಾಡಿ ಪರಿಷ್ಕರಿಸಿದ ಮಸೂದೆಯ) ತೃತೀಯ ಪಠನ.
See also 1reading
2reading ರೀಡಿಂಗ್‍
ಗುಣವಾಚಕ
  1. ಓದುವ; ಓದಿಗೆ ಸಂಬಂಧಿಸಿದ; ಪಾಠ್ಯ; ಪಠ್ಯ; ಪಠನೀಯ: a reading book ಓದುವ ಪುಸ್ತಕ; ಪಠ್ಯಪುಸ್ತಕ.
  2. ಓದುವ; ವಾಚಕ; ಪಾಠಕ: his reading public ಆತನ (ಗ್ರಂಥಗಳನ್ನು ಓದುವ) ವಾಚಕವೃಂದ; ಪಾಠಕವೃಂದ.