reader ರೀಡರ್‍
ನಾಮವಾಚಕ
  1. ಓದುಗ; ಓದುವವನು; ಪಾಠಕ ಯಾ ವಾಚಕ:
    1. ಭಾಷೆ ಮೊದಲಾದವನ್ನು ಓದಬಲ್ಲವನು.
    2. ಓದುವುದರಲ್ಲಿ ಆಸಕ್ತಿ ಉಳ್ಳವನು.
  2. ಭವಿಷ್ಯ, ಶಕುನ ಮೊದಲಾದವನ್ನು ಹೇಳಬಲ್ಲವನು.
  3. ಮರ್ಮಜ್ಞ; ಜನರ ಮನಸ್ಸನ್ನು, ಮರ್ಮವನ್ನು ಅರಿಯಬಲ್ಲವನು.
  4. (ಪ್ರಕಟಣೆಗಾಗಿ ಬಂದ ಹಸ್ತಪ್ರತಿಯನ್ನು ಓದಿ ಸಲಹೆ ನೀಡಲು ಮತ್ತು ವರದಿ ಮಾಡಲು ಪ್ರಕಾಶಕನು ನೇಮಿಸಿಕೊಳ್ಳುವ) ಹಸ್ತಪ್ರತಿವಾಚಕ; ಹಸ್ತಪ್ರತಿಯ ಓದುಗ.
  5. ಕರಡಚ್ಚನ್ನು, ಪ್ರೂಹನ್ನು ತಿದ್ದುವವನು.
  6. (ಚರ್ಚಿನ) ಸ್ತೋತ್ರಪಾಠಕ; ಮುಖ್ಯವಾಗಿ ಆರಾಧನೆಯ ಭಾಗಗಳನ್ನು ಗಟ್ಟಿಯಾಗಿ ಓದಲು ನೇಮಿಸಲ್ಪಟ್ಟವನು.
  7. ರೀಡರು; ಪ್ರವಾಚಕ; ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕನಿಗಿಂತ ಕಡಮೆ ವರ್ಗದ ಅಧ್ಯಾಪಕ: reader in Roman law ರೋಮನ್‍ ನ್ಯಾಯಶಾಸ್ತ್ರದ ರೀಡರು.
  8. (ಮುಖ್ಯವಾಗಿ ಭಾಷೆಯನ್ನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗಾಗಿ ಬರೆದ ಸಂಕಲಿತ ಪಾಠಗಳ) ಓದುವ ಪುಸ್ತಕ; ವಾಚನ ಪುಸ್ತಕ; ಪಾಠಪುಸ್ತಕ: A High School English reader ಪ್ರೌಢಶಾಲಾ ಇಂಗ್ಲಿಷ್‍ ಪಾಠಪುಸ್ತಕ.
  9. ರೀಡರ್‍; ಮೈಕ್ರೋಹಿಲ್ಮ್‍ ಮೊದಲಾದವುಗಳಿಂದ ಓದಲು ಅನುಕೂಲಿಸುವ ಸಾಧನ.
  10. ಒಂದು ನಿರ್ದಿಷ್ಟ ಗ್ರಂಥಾಲಯವನ್ನು ಬಳಸಲು ಹಕ್ಕುಳ್ಳ ವ್ಯಕ್ತಿ; ವಾಚಕ; ಓದುಗ.